ಕರಾವಳಿಸುಳ್ಯ

ವಿಶೇಷಚೇತನ ವ್ಯಕ್ತಿಗೆ 6.5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ರು..ಯಾರು? ಏನು? ಇಲ್ಲಿದೆ ನೋಡಿ ಡಿಟೇಲ್ಸ್‌

ನ್ಯೂಸ್‌ ನಾಟೌಟ್‌: ಹಲವಾರು ವರ್ಷಗಳಿಂದ ತನ್ನದೊಂದು ಸ್ವಂತ ಸೂರು ನಿರ್ಮಿಸಿಕೊಳ್ಳಬೇಕು ಎಂದು ಕನಸುಕಟ್ಟಿಕೊಂಡಿದ್ದ ವಿಶೇಷಚೇತನ ವ್ಯಕ್ತಿಗೆ ಸಂಘಟನೆ ಮೂಲಕ ಸಹೃದಯಿ ವ್ಯಕ್ತಿಗಳೆಲ್ಲ ಸೇರಿ ಮನೆ ಕಟ್ಟಿಕೊಟ್ಟಿದ್ದಾರೆ. ಈ ಅಪರೂಪದ ಸನ್ನಿವೇಶಕ್ಕೆ ಸುಳ್ಯ ಸಾಕ್ಷಿಯಾಗಿರುವುದು ವಿಶೇಷ.

ರೋಟರಿ ಕ್ಲಬ್‌ ಸುಳ್ಯ ಮತ್ತು ರೋಟರಿ ಜಿಲ್ಲಾ ಅನುದಾನದ ಸಹಾಯದಿಂದ ಮಂಡೆಕೋಲು ಗ್ರಾಮದ ವಿಶೇಷಚೇತನ ವ್ಯಕ್ತಿ ಬೇಡು ಅವರಿಗೆ 6.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಕೊಡಲಾಗಿದೆ. ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಬುಧವಾರ ನೆರವೇರಿತು. ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್‌ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ್‌ ಕೆ.ಸಿ. ದೀಪ ಬೆಳಗಿಸಿ ಉದ್ಘಾಟಿಸಿದರು. ರೋಟರಿ ಜಿಲ್ಲಾ ಗವರ್ನರ್‌ ಪ್ರಕಾಶ್‌ ಕಾರಂತ್‌ ಮನೆಯ ಕೀ ಹಸ್ತಾಂತರಿಸಿದರು. ವಲಯ 5ರ ಅಸಿಸ್ಟೆಂಟ್‌ ಗವರ್ನರ್‌ ಶಿವರಾಮ ಏನೆಕಲ್ಲು ಫಲಾನುಭವಿಗೆ ಹಾಸಿಗೆ, ಮಂಚ ಹಸ್ತಾಂತರಿಸಿದರು.

ಮಂಡೆಕೋಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾ ಪಾತಿಕಲ್ಲು, ನಿಯೋಜಿತ ಅಸಿಸ್ಟೆಂಟ್‌ ಗವರ್ನರ್‌ ಪುರಂದರ ರೈ, ಝೋನಲ್‌ ಲೆಫ್ಟಿನೆಂಟ್‌ ಪ್ರೀತಮ್‌ ಡಿ.ಕೆ, ಪ್ರಭಾಕರನ್ ನಾಯರ್‌ , ರೋಟರಿ ಪದಾಧಿಕಾರಿಗಳಾದ ಸೀತರಾಮ ರೈ ಸವಣೂರು, ಮಂಜುನಾಥ ಆಚಾರ್ಯ, ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸುರೇಶ್‌ ಕಣೆಮರಡ್ಕ, ರೋಟರಿ ಸುಳ್ಯ ಸಿಟಿ ಅಧ್ಯಕ್ಷ ಮುರಳೀಧರ ರೈ ಮತ್ತಿತರರು ಉಪಸ್ಥಿತರಿದ್ದರು. ಸುಳ್ಯ ರೋಟರಿ ಕ್ಲಬ್‌ ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಮಧುರಾ ಎಂ. ಆರ್‌. ವಂದಿಸಿದರು. ಕಾರ್ಯಕ್ರಮದಲ್ಲಿ ಸುಳ್ಯ ರೋಟರಿ ಸದಸ್ಯರಾದ ಪ್ರಭಾಕರ್ ಸಿ. ಎಚ್‌. ಕೇಶವ ಪಿ.ಕೆ. ಆನಂದ್‌ ಕಂಡಿಗ, ಹರಿರಾಯ ಕಾಮತ್‌, ಗಣೇಶ್‌ ಆಳ್ವ, ಕೃಷ್ಣ ಭಟ್‌, ಜಗದೀಶ್‌ ಅಡ್ತಲೆ, ರಜತ್‌ ಅಡ್ಕಾರ್, ಮಧುಸೂದನ್‌ ಕುಂಭಕ್ಕೋಡು, ಲತಾ ಮಧುಸೂದನ್‌, ನವೀನ್‌ಚಂದ್ರ ನಾಯಕ್‌, ಪ್ರದೀಪ್‌, ಎನ್‌.ಎ. ಜಿತೇಂದ್ರ, ಬೆಳ್ಯಪ್ಪ, ಗೌಡ, ಜೆ.ಕೆ. ರೈ ಮತ್ತಿತರರು ಪಾಲ್ಗೊಂಡಿದ್ದರು.

Related posts

ಸುಳ್ಯ:ದವಡೆ ಮೂಳೆ ಮುರಿದು ಯಾತನೆ ಆನುಭವಿಸುತ್ತಿದ್ದ 1 ತಿಂಗಳ ಪುಟ್ಟ ಕರು..!,ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಅದರ ಬಾಳಲ್ಲಿ ದೇವರಾದ ಪಶುವೈದ್ಯಾಧಿಕಾರಿ..!ಏನಿದು ಘಟನೆ?ಹೇಗಿತ್ತು ಆ ಶಸ್ತ್ರ ಚಿಕಿತ್ಸೆ?ಈ ವರದಿ ಓದಿ..

ಉಪ್ಪಿನಂಗಡಿ: ನಿರ್ಮಾಣ ಹಂತದ ಕಟ್ಟಡದಲ್ಲಿ ಮೃತದೇಹ ಪತ್ತೆ..! ಯುವಕ ಕೊಲೆಯಾಗಿರುವ ಸಾಧ್ಯತೆ

ಮಹಿಳಾ ‘ಡಿಎಸ್ಪಿ’ಯ ಕೂದಲು ಹಿಡಿದೆಳೆದು ಹಲ್ಲೆ ನಡೆಸಿದ ವ್ಯಕ್ತಿ..! ಏನಿದು ಘಟನೆ..? ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ..!