ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಭಾರತದ ನೂತನ ಸೇನಾ ಮುಖ್ಯಸ್ಥರಾಗಿ ಉಪೇಂದ್ರ ದ್ವಿವೇದಿ ಆಯ್ಕೆ, ಸೇನೆಯಲ್ಲಿ 40 ವರ್ಷಗಳ ಸುದೀರ್ಘ ಸೇವೆ ಮಾಡಿದ್ದ ಲೆಫ್ಟಿನೆಂಟ್ ಜನರಲ್

ನ್ಯೂಸ್ ನಾಟೌಟ್: ವಿಶ್ವದ 4ನೇ ಅತಿ ದೊಡ್ಡ ಸೇನೆಯಾದ ಭಾರತೀಯ ಸೇನೆಯ ಹೊಸ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಹಾಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಸಿ ಪಾಂಡೆಯವರ ಅಧಿಕಾರಾವಧಿ ಜೂನ್ 30ಕ್ಕೆ ಮುಕ್ತಾಯವಾಗಲಿದೆ ಎಂದು ವರದಿ ತಿಳಿಸಿದೆ.

ಪರಮ ವಿಶಿಷ್ಟ ಸೇವಾ ಪದಕ ಪುರಸ್ಕೃತರಾಗಿರುವ ದ್ವಿವೇದಿ, ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೂನ್ 30ರಂದು ಸಂಜೆ ಜನರಲ್ ಪಾಂಡೆಯವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

1964ರಲ್ಲಿ ಜನಿಸಿದ ಲೆಫ್ಟಿನೆಂಟ್ ಜನರಲ್ ದ್ವಿವೇದಿ ಜಮ್ಮು & ಕಾಶ್ಮೀರ ರೈಫಲ್ಸ್ ನಲ್ಲಿ 1984ರ ಡಿಸೆಂಬರ್ 15ರಂದು ನಿಯೋಜನೆಗೊಂಡಿದ್ದರು. 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಮಾಂಡ್ ಆಫ್ ರೆಜಿಮೆಂಟ್ (18 ಜಮ್ಮು & ಕಾಶ್ಮೀರ ರೈಫಲ್ಸ್), ಬ್ರಿಗೇಡ್ (26 ಸೆಕ್ಟರ್ ಅಸ್ಸಾಂ ರೈಫಲ್ಸ್), ಡಿಐಜಿ, ಅಸ್ಸಾಂ ರೈಫಲ್ಸ್ ಮತ್ತಿತರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎನ್ನಲಾಗಿದೆ. ಉತ್ತರ ಕಮಾಂಡ್ ನ ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರಾಗಿ 2022ರಿಂದ 24ರವರೆಗೆ ಕಾರ್ಯನಿರ್ವಹಿಸಿದ್ದಾರೆ.

Click 👇

https://newsnotout.com/2024/06/darshan-case-they-demands-a-lot-under-police-custody
https://newsnotout.com/2024/06/darshan-and-gang-plan
https://newsnotout.com/2024/06/anupam-agarwal-reacts-on-mangaluru-vijayothsava-issue
https://newsnotout.com/2024/06/vijaya-lakshmi-darshan-insta-unfollowed-by-wife

Related posts

ಗೂಡ್ಸ್ ರೈಲಿನ ಚಕ್ರದ ನಡುವಿನ ಜಾಗದಲ್ಲಿ ಕುಳಿತು ಪ್ರಯಾಣಿಸಿದ ಬಾಲಕ..! ಇಲ್ಲಿದೆ ಮನಕಲಕುವ ವೈರಲ್ ವಿಡಿಯೋ

ಉಡುಪಿ: 6ನೇ ಮಹಡಿಯಿಂದ ಜಿಗಿದ 19 ರ ವಿದ್ಯಾರ್ಥಿ..! ಅಷ್ಟಕ್ಕೂ ಪರೀಕ್ಷಾ ಹಾಲ್ ನಲ್ಲಿ ನಡೆದದ್ದೇನು..?

ಕಾರ್ಕಳ: ಚಲಿಸುತ್ತಿದ್ದ ಬೈಕ್ ಗೆ ಸ್ಮಶಾನದ ಬಳಿ ನಾಯಿ ಅಡ್ಡ ಬಂದು ಬೈಕ್ ಪಲ್ಟಿ..! 2 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವ ಜೋಡಿಯ ದುರಂತ ಕಥೆ..!