ಕರಾವಳಿಸುಳ್ಯ

ಬೆಳ್ಳಾರೆ: ದೀಪಾವಳಿ ಪ್ರಯುಕ್ತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ವಿಶೇಷ ರಿಯಾಯಿತಿ ಮಾರಾಟ, ಮದುವೆ ಉಡುಪುಗಳ ವೈವಿಧ್ಯಮಯ ಕಲೆಕ್ಷನ್‌ ಗಳು

241

ನ್ಯೂಸ್ ನಾಟೌಟ್ : ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹೀಗಾಗಿ ಪರಿಶುದ್ಧತೆ ಹಾಗೂ ಗುಣಮಟ್ಟದ ವಸ್ತ್ರಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಪ್ರೀತಿ ವಿಶ್ವಾಸ, ನಂಬಿಕೆ, ಗಳಿಸಿ ವಸ್ತ್ರೋದ್ಯಮದಲ್ಲಿ ತನ್ನದೇ ಆದ ಚಾಪು ಮೂಡಿಸಿದ ಬೆಳ್ಳಾರೆಯ ಹೆಸರಾಂತ ವಸ್ತ್ರ ಮಳಿಗೆ ವಿಶೇಷ ಆಫರ್‌ಗಳನ್ನು ನೀಡುತ್ತಿದೆ. ಸುಳ್ಯ ತಾಲೂಕು ಮಾತ್ರವಲ್ಲದೇ ಹೊರ ತಾಲೂಕಿನವರ ಮನಗೆದ್ದ ಪ್ರತಿಷ್ಠಿತ ಪ್ರಸಾದ್ ಟೆಕ್ಸ್ ಟೈಲ್ಸ್‌ನಲ್ಲಿ ಮದುವೆ ಸಂಭ್ರಮ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಶೇ.5 ರಿಂದ 10ರವರೆಗೆ ವಿಶೇಷ ರಿಯಾಯಿತಿ ದರದಲ್ಲಿಇಲ್ಲಿ ನಿಮ್ಮ ಮನಕ್ಕೊಪ್ಪುವ ಬಟ್ಟೆಗಳು ಲಭ್ಯವಿರಲಿದೆ.

ಒಂದೇ ಸೂರಿನಡಿ ಖ್ಯಾತ ಕಂಪನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಮದುವೆ ಜವುಳಿ ಮಳಿಗೆ ಇದಾಗಿದ್ದು, ಜವುಳಿ ಉದ್ಯಮದಲ್ಲಿ ಸದಾ ಹೊಸತನ ಪರಿಚಯಿಸುತ್ತಲೇ ಬರುತ್ತಿದೆ. ಸುಳ್ಯ ತಾಲೂಕಿನ ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಈ ಪ್ರಸಾದ್ ವಸ್ತ್ರ ಮಳಿಗೆ ಎಲ್ಲರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಗ್ರಾಹಕರ ವಿಶ್ವಾಸ ಗಳಿಸಿದೆ.

1972ರಲ್ಲಿ ಸ್ಥಾಪನೆಗೊಂಡ ಜವುಳಿ ಮಳಿಗೆ ಇಂದು ನೂತನ ಹಾಗೂ ಸುಸಜ್ಜಿತ, ವಿಶಾಲ, ಉತ್ಕೃಷ್ಟ ಗುಣಮಟ್ಟದ ಸೇವೆ ನೀಡುತ್ತಾ ಬಂದಿದೆ. ಒಮ್ಮೆ ಈ ವಸ್ತ್ರ ಮಳಿಗೆಗೆ ಭೇಟಿ ನೀಡಿದರೆ ಸಾಕು ನಿಮ್ಮ ಮನದಿಚ್ಛೆಯ ಬಟ್ಟೆಗಳ ಖರೀದಿಯನ್ನು ಅತೀ ಸುಲಭವಾಗಿಸಬಹುದು. ಇಲ್ಲಿ ವಿಶೇಷವಾಗಿ ನೂತನ ಶೈಲಿಯ ಮದುವೆ ಸೀರೆಗಳು, ಫ್ಯಾನ್ಸಿ ಸೀರೆ ಮತ್ತು ಮಹಿಳೆಯರು ಇಷ್ಟಪಡುವ ಕಾಂಚಿ ಸೀರೆ, ಟಿಶ್ಯೂ ಸೀರೆ, ಸಾಪ್ಟ್ ಸಿಲ್ಕ್, ಕಾಟನ್ ಸೀರೆ, ಬಾರ್ಡರ್ ಸೀರೆ ಕೈಗೆಟಕುವ ದರದಲ್ಲಿ ಲಭ್ಯವಿದೆ.

ಇದಲ್ಲದೇ ಆಧುನಿಕ ವಿನ್ಯಾಸದ ಗಾಗ್ರ, ಲೆಹೆಂಗಾ, ಗೌನ್, ಕ್ರೇಪ್ ಟಾಪ್, ಜೈಪುರ ಕಾಟನ್ ಸೆಟ್, ಜೀನ್ಸ್, ಕುರ್ತಾ ಟಾಪ್, ಪುರುಷರ ಎಲ್ಲಾ ಬಗೆಯ ಬ್ರಾಂಡೆಡ್ ಶರ್ಟ್, ಟ್ರೌಸರ್ಸ್, ಶೇರ್ವಾನಿ, ಸೂಟ್, ದಿನಧಾರಣೆಯ ಟಿ-ಶರ್ಟ್, ಬರ್ಮುಡ, ಮಕ್ಕಳ ಬಟ್ಟೆಗಳು, ಗಂಡು ಮಕ್ಕಳ ಸೂಟ್, ಬಾಬಾಸೂಟ್, ಶರ್ಟ್, ಪ್ಯಾಂಟ್, ಕುರ್ತಾ ಸೆಟ್, ಪುರುಷರ, ಮಹಿಳೆಯರ ಮತ್ತು ಮಕ್ಕಳ ಸಿದ್ಧ ಉಡುಪುಗಳ ವೈವಿಧ್ಯಮಯ ಕಲೆಕ್ಷನ್ ಗಳು ಲಭ್ಯವಿದೆ.

ಬ್ರ್ಯಾಂಡೆಡ್‌ ಕಂಪನಿಗಳ ಸೂಟಿಂಗ್ಸ್, ಶರ್ಟಿಂಗ್, ರಾಮರಾಜ್, ಉದಯಮ್, ರೇಮಂಡ್ಸ್, ಸಿಯಾರಾಮ್ಸ್, ಪೋಪಿ, ಸಿರಿ ಮೊದಲಾದ ಕಂಪನಿಗಳ ಅಧಿಕೃತ ಡೀಲರ್ ಆಗಿರುತ್ತಾರೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಉತ್ತಮ ಜನಮನ್ನಣೆ ಪಡೆದ ಸಂಸ್ಥೆಗೆ ಒಮ್ಮೆ ಭೇಟಿ ನೀಡುವುದರ ಮೂಲಕ ಹೊಚ್ಚ ಹೊಸ ಸಂಗ್ರಹವನ್ನು ನಿಮ್ಮದಾಗಿಸಿಕೊಳ್ಳಬಹುದು. ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿರುವ ವಿಶೇಷ ಆಫರ್‌ಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಂಸ್ಥೆಯ ಮಾಲೀಕರಾದ ಬಿ.ನರಸಿಂಹ ಜೋಶಿ ತಿಳಿಸಿದ್ದಾರೆ.

  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget