ಜೀವನಶೈಲಿ

ದೀಪಾವಳಿ ಸ್ಪೆಷಲ್: ಈ ತಿಂಗಳಿನಲ್ಲೇ ಬರೋಬ್ಬರಿ 8 ಕಾರುಗಳು ಲಾಂಚ್‌ಗೆ ರೆಡಿ, ಯಾವ ಕಂಪನಿ ಕಾರು? ಏನಿದರ ವಿಶೇಷತೆ?

ಬೆಂಗಳೂರು: ದೀಪಾವಳಿ ಬಂತೆಂದರೆ ಭಾರತೀಯರಿಗೆ ಎಲ್ಲಿಲ್ಲದ ಸಂಭ್ರಮ. ಕರೋನಾ ನಡುವೆಯೂ ಈ ಸಲ ಹಬ್ಬವನ್ನು ಸ್ಮರಣೀಯವಾಗಿಸಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಹಬ್ಬ ಎಂದ ಮೇಲೆ ಸಾಕಷ್ಟು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತವೆ. ಗ್ರಾಹಕರಿಂದ ಖರೀದಿಯೂ ಜೋರಾಗಿರುತ್ತದೆ. ಇದಕ್ಕೆ ಆಟೊಮೋಬೈಲ್ ಕೂಡ ಹೊರತಾಗಿಲ್ಲ. ಈ ತಿಂಗಳಿನಲ್ಲಿ ವಿವಿಧ ಕಂಪನಿಗಳÀ 8 ಕಾರುಗಳು ಮಾರುಕಟ್ಟೆಗೆ ಬರಲಿವೆ. ಯಾವುವು ಆ ಕಾರುಗಳು? ಅವುಗಳ ವಿಶೇಷತೆ ಏನು ಅನ್ನೋದನ್ನ ನೋಡೋಣ..

ಯಾವ ಕಾರು? ಹೇಗೆ ಬಿಡುಗಡೆ?

  • ಬಜೆಟ್ ಕಾರಿನಿಂದ ಪ್ರೀಮಿಯಂ ಕಾರುಗಳು, ಎಲೆಕ್ಟ್ರಿಕ್ ಕಾರುಗಳು
  • ಹೊಸ ತಲೆಮಾರಿನ ಮಾರುತಿ ಸೆಲೆರಿಯೋ
  • ಆಡಿ ಕ್ಯೂ 5
  • ಸ್ಕೋಡಾ ಸಾಲ್ವಿಯಾ
  • ಮರ್ಸಿಡೇಸ್ ಬೆಂಜ್ ಎಎಂಜಿ ಎ45 ಎಸ್
  • ಪೋರ್ಶೆ ಟೈಕಾನ್ ಇವಿ
  • ಪೋರ್ಶೆ ಮ್ಯಾಕನ್
  • ಮಿನಿ ಕೂಪರ್ ಎಸ್‌ಇ
  • ವೋಕ್ಸ್ ವ್ಯಾಗನ್ ಟೈಗನ್

ಹೊಸ ತಲೆಮಾರಿನ ಸೆಲೆರಿಯೋ

ಮಾರುತಿ ಕಂಪನಿಯ ಹೊಸ ತಲೆಮಾರಿನ ಸೆಲೆರಿಯೋ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಲಾಂಚ್ ಆಗುವುದಕ್ಕಾಗಿ ಸಿದ್ಧವಾಗಿದೆ. ಈ ಕಾರ್ ಹೊಸ ವಿನ್ಯಾಸ, ಹೊಸ ಎಂಜಿನ್ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಲಿದೆ ಎನ್ನಲಾಗಿದೆ. ಈ ಹೊಸ ಸೆಲೆರಿಯೋ ಕಾರು ಹುಂಡೈ ಸ್ಯಾಂಟ್ರೋ, ಟಾಟಾ ಟಿಯಾಗೋ, ಡಸ್ಟನ್ ಗೋ ಕಾರುಗಳಿಗೆ ಪೈಪೋಟಿ ನೀಡಲಿದೆ.

ಆಡಿ ಕ್ಯೂ5

ಭಾರತೀಯ ಮಾರುಕಟ್ಟೆಗೆ ಆಡಿ ಕ್ಯೂ5 ಎಸ್ ಯುವಿ ಮರಳಿ ಪ್ರವೇಶಿಸಲಿದೆ. ಬಿಎಸ್ 6 ನಿಯಮಗಳೊಂದಿಗೆ ಪೆಟ್ರೋಲ್ ಎಂಜಿನ್, ಹೊಸ ವಿನ್ಯಾಸ ಮತ್ತು ಹೊಸ ಫೀಚರ್ಗಳೊಂದಿಗೆ 2021ರ ಆಡಿ ಕ್ಯೂ5 ಭಾರತೀಯ ಮಾರುಕಟ್ಟೆಗೆ ಮರಳಿ ಲಾಂಚ್ ಆಗುತ್ತಿದೆ. ಈ ಆಡಿ ಕ್ಯೂ5 ಕಾರ್ ಸಖತ್ ಪೈಪೋಟಿ ನೀಡುವ ಸಾಧ್ಯತೆ ಇದೆ.

ಮರ್ಸಿಡೆಸ್ ಬೆಂಜ್ ಎಎಂಜಿ J45 ಎಸ್

ಭಾರತೀಯ ಮಾರುಕಟ್ಟೆಗೆ ಮರ್ಸಿಡೆಸ್ ಬೆಂಜ್ ಇಂಡಿಯಾ ಕಂಪನಿಯು ನವೆಂಬರ್ 17ರಂದು ಎಎಂಜಿ J45 ಎಸ್ ಕಾರನ್ನು ಲಾಂಚ್ ಮಾಡಲಿದೆ. 2.0 ಲೀಟರ್, ನಾಲ್ಕು ಸಿಲಿಂಡರ್ ಹಾಗೂ ಟರ್ಬೋಚಾರ್ಜ್ಡ್ ಎಂಜಿನ್ ಇರಲಿದೆ.

ಪೋರ್ಶೆ ಟೈಕಾನ್ ಇವಿ

ಈ ಪೋರ್ಶೆ ಟೈಕಾನ್ ಇವಿ ಈ ಮೊದಲೇ ಲಾಂಚ್ ಆಗಬೇಕಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದಿಂದ ಸಾಧ್ಯವಾಗಿರಲಿಲ್ಲ. ಇದೀಗ ಕಂಪನಿಯು ಈ ನವೆಂಬರ್ 12ರಂದು ಈ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಭಾರತದಲ್ಲಿ ಈ ಎಲೆಕ್ಟ್ರಿಕ್ ಕಾರು ಎರಡು ವೆರಿಯೆಂಟ್ ಗಳಲ್ಲಿ ದೊರೆಯಲಿದೆ.

ಪೋರ್ಶೆ ಮಕಾನ್

ಪೋರ್ಶೆ ಕಂಪನಿಯ ಮತ್ತೊಂದು ಎಸ್ಯುವಿ ಇದು. ಪೋರ್ಶೆ ಒಚಿಛಿಚಿಟಿ ಎಸ್‌ಯುವಿ 2.0 ಲೀಟರ್, ನಾಲ್ಕು ಸಿಲೆಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದೆ. ಸೆವೆನ್ ಸ್ಪೀಡ್ ಆಅಖಿ ಟ್ರಾನ್ಸಿಮಿಷನ್ ಇದೆ. ಕಂಪನಿಯು ಇದರಲ್ಲೇ 2.9 «6 ಎಂಜನ್ ಹೊಂದಿರುವ ಮತ್ತೊಂದು ವೆರಿಯೆಂಟ್ ಕೂಡ ಲಾಂಚ್ ಮಾಡುವ ಸಾಧ್ಯತೆ ಇದೆ.

ಮಿನಿ ಕೂಪರ್ ಎಸ್‌ಇ

ಬಿಎಂಡಬ್ಲ್ಯೂ ತನ್ನ ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್‌ಇ ಕಾರನ್ನು ಭಾರತೀಯ ಮಾರುಕಟ್ಟೆಗೆ ಈ ತಿಂಗಳೇ ಲಾಂಚ್ ಮಾಡಲಿದೆ. ಈಗಾಗಲೇ ಈ ಕಾರಿಗೆ ಬುಕ್ಕಿಂಗ್ ಆರಂಭಿಸಲಾಗಿದೆ. ಒಂದು ಲಕ್ಷ ರೂ. ಕೊಟ್ಟು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಮೂರು ಬಾಗಿಲುಗಳನ್ನು ಹೊಂದಿರುವ ಈ ಕಾರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 270 ಕಿ.ಮೀ ತನಕ ಪ್ರಯಾಣಿಸಬಹುದು.

Related posts

ಹಕ್ಕಿಜ್ವರದ ಆತಂಕ, ಭಾರತದಲ್ಲಿ ಮನುಷ್ಯರಿಗೂ ಹರಡುವ ಭೀತಿ, ಏನಂದ್ರು ಆರೋಗ್ಯ ತಜ್ಞರು?

ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ ! ಅಂತರಾಷ್ಟ್ರೀಯ ತಲ್ಲಣಗಳು ಬೆಲೆ ಏರಿಕೆಗೆ ಕಾರಣವೇ ?

ಅಬ್ಬಬ್ಬಾ! ಸೀಬೆ ಎಲೆಯಿಂದ ಇಷ್ಟೊಂದು ಪ್ರಯೋಜನಗಳಾ?