ನ್ಯೂಸ್ ನಾಟೌಟ್: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೂನಡ್ಕದಲ್ಲಿ ಶಿಕ್ಷಕರು ಮತ್ತು ಪೊಷಕರು ನೂತನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಬರಮಾಡಿಕೊಂಡರು.
ನಿನ್ನೆ(ಜೂ.2) ರಂದು ಈ ಪ್ರಯುಕ್ತ ಶಾಲೆಯಲ್ಲಿ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಸಂಪಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೊಹಮ್ಮದ್ ಹನೀಫ್ ಎಸ್.ಕೆ, ಗ್ರಾ.ಪಂ ಸದಸ್ಯೆ ಅನುಪಮಾ, ನಿವೃತ್ತ ಮುಖ್ಯೋಪಾಧ್ಯಾಯರಾದ ಭವಾನಿ ಪಿ ಮತ್ತು SDMC ಅಧ್ಯಕ್ಷ ರವೀಂದ್ರ ಎನ್ ಭಾಗಿಯಾಗಿದ್ದರು.
View this post on Instagram
ಮುಖ್ಯ ಶಿಕ್ಷಕರಾದ ಭವಾನಿಶಂಕರ ಕೆ.ಜಿ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು.
ಶಿಕ್ಷಕರಾದ ನಾಗ ಶೆಟ್ಟಿ ನಿರೂಪಣೆ ಮಾಡಿದರು. ಈ ವೇಳೆ SDMC ಸದಸ್ಯರು ಮತ್ತು ಪೋಷಕರು ಹಾಗು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.