ಕ್ರೈಂದೇಶ-ವಿದೇಶವೈರಲ್ ನ್ಯೂಸ್

ನೇಪಾಳಿ ವಿದ್ಯಾರ್ಥಿನಿಯನ್ನು ಅಮೆರಿಕಾದಲ್ಲಿ ಗುಂಡಿಕ್ಕಿ ಕೊಂದ ಭಾರತೀಯ ವ್ಯಕ್ತಿ ..! ಅಪಾರ್ಟ್‌ಮೆಂಟ್‌ನೊಳಗೆ ಶವ ಕಂಡು ಪೋನ್ ಮಾಡಿದ ಸ್ಥಳೀಯರು..!

ನ್ಯೂಸ್‌ ನಾಟೌಟ್‌: ಅಪಾರ್ಟ್‌ಮೆಂಟ್‌ವೊಂದರಲ್ಲಿ ದರೋಡೆ ಮಾಡಲು ಹೋಗಿ ಅಲ್ಲಿದ್ದ ವಿದ್ಯಾರ್ಥಿನಿಯನ್ನು ಭಾರತೀಯ ಮೂಲದ ವ್ಯಕ್ತಿ ಗುಂಡಿಕ್ಕಿ ಕೊಂದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ನೇಪಾಳ ಮೂಲದ 21 ವರ್ಷದ ವಿದ್ಯಾರ್ಥಿನಿ ಹತ್ಯೆಯಾದವಳು ಎಂದು ಗುರುತಿಸಲಾಗಿದೆ. 52 ವರ್ಷದ ಬಾಬಿ ಸಿನ್ಹ್ ಶಾ ಗುಂಡಿಟ್ಟು ಕೊಂದ ವ್ಯಕ್ತಿ ಎನ್ನಲಾಗಿದೆ. ಸೋಮವಾರ ಸಂಜೆ 5:30 ರ ಸುಮಾರಿಗೆ ಸಮುದಾಯ ಕಾಲೇಜು ವಿದ್ಯಾರ್ಥಿನಿ ಮುನಾ ಪಾಂಡೆ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಗುಂಡೇಟಿಗೆ ಬಲಿಯಾಗಿದ್ದಾಳೆ ಮತ್ತು ತಡವಾಗಿ ವಿಷಯ ಬೆಳಕಿಗೆ ಬಂದಿದೆ.

ಅಪಾರ್ಟ್‌ಮೆಂಟ್‌ನೊಳಗಿನ ಶವದ ಬಗ್ಗೆ ಅನಾಮಧೇಯ ಕರೆ ಬಂದಿತ್ತು. ಆಕೆಯ ಅಪಾರ್ಟ್‌ಮೆಂಟ್ ಸಂಕೀರ್ಣದ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಆಕೆ ಮೃತಪಟ್ಟಿರುವುದು ತಿಳಿದುಬಂದಿದೆ. ಕೊಲೆ ಬಳಿಕ ಪರಾರಿಯಾಗಿದ್ದ ಬಾಬಿ ಶಾ ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಪಾಂಡೆ 2021 ರಲ್ಲಿ ನೇಪಾಳದಿಂದ ಹೂಸ್ಟನ್ ಸಮುದಾಯ ಕಾಲೇಜಿನಲ್ಲಿ ಅಧ್ಯಯನ ಮಾಡಲು ಬಂದಿದ್ದರು. ಆಕೆಯ ತಾಯಿ ಅವಳೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ಇರಲು ಬರುವವರಿದ್ದರು. ಅಷ್ಟರಲ್ಲಾಗಲೇ ದುರ್ಘಟನೆ ನಡೆದಿದೆ ಎಂದು ಹೂಸ್ಟನ್‌ನ ನೇಪಾಳಿ ಅಸೋಸಿಯೇಷನ್ ​​​​ಸದಸ್ಯರು ತಿಳಿಸಿದ್ದಾರೆ.

Click

https://newsnotout.com/2024/08/udupi-padukere-beach-kannada-news-police-stopped-her-and-localates-appreciates-police/
https://newsnotout.com/2024/08/helicopter-kedaranatha-kannada-news-video-viral-mandakini-river/
https://newsnotout.com/2024/08/pavitra-gowda-jail-kannada-news-darshan-thugudeepa-dogs-shift/
https://newsnotout.com/2024/08/real-estate-business-conflict-kannada-news-fire-viral/
https://newsnotout.com/2024/08/kodagu-private-bus-drivers-conflict-kannada-news-gonikoppa/

Related posts

ದೇವಸ್ಥಾನದ ಧರ್ಮದರ್ಶಿಯನ್ನು ಎರಡೂವರೆ ವರ್ಷಗಳಿಂದ ಸಂಚು ಹಾಕಿ ಹತ್ಯೆ..! ಆತನ ಪೂಜಾ ವಿಧಾನಕ್ಕೂ ಕೊಲೆಗೂ ಇತ್ತು ನಿಗೂಢ ಸಂಬಂಧ..!

ತಲೆಗೆ ಗುಂಡು ಹಾರಿಸಿಕೊಂಡ 17ರ ಬಾಲಕ..! ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಹುಡುಗ ಆತ್ಮಹತ್ಯೆ

ಬೀದಿ ನಾಯಿಗಳು ಕಣ್ಮರೆಯಾದದ್ದಕ್ಕೆ ಪೊಲೀಸ್ ಠಾಣಾ ಮೆಟ್ಟಿಲೇರಿದ ಈ ವ್ಯಕ್ತಿ ಯಾರು? ಇಲ್ಲಿದೆ ಪ್ರಾಣಿ ಪ್ರೇಮಿಯ ಕಣ್ಣೀರ ಕಥೆ