Latestಕ್ರೈಂದೇಶ-ವಿದೇಶ

ನೇಪಾಳದಲ್ಲಿ ರಾತ್ರಿ 6.1 ತೀವ್ರತೆಯ ಪ್ರಬಲ ಭೂಕಂಪ..! ಭಾರತ,ಚೀನಾ ಮತ್ತು ಟಿಬೆಟ್‍ ನಲ್ಲೂ ಕಂಪನ..!

509

ನ್ಯೂಸ್‌ ನಾಟೌಟ್ : ನೇಪಾಳದಲ್ಲಿ ಶುಕ್ರವಾರ(ಫೆ.28) ನಸುಕಿನಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ನೇಪಾಳದ ಕೇಂದ್ರ ಹಿಮಾಲಯ ಪ್ರದೇಶದ ಭಾಗವಾಗಿರುವ ಸಿಂಧುಪಾಲ್‍ ಚೌಕ ಜಿಲ್ಲೆಯಲ್ಲಿ ಇದರ ಕೇಂದ್ರಬಿಂದು ಇತ್ತು.

ರಾಷ್ಟ್ರೀಯ ಭೂಕಂಪ ನಿಗಾ ಮತ್ತು ಸಂಶೋಧನಾ ಕೇಂದ್ರದ ವೆಬ್‍ಸೈಟ್ ಪ್ರಕಾರ, ಸ್ಥಳೀಯ ಕಾಲಮಾನ ನಸುಕಿನ 2.51ಕ್ಕೆ ಭೂಕಂಪ ಸಂಭವಿಸಿದ್ದು, ಸಿಂಧುಪಾಲ್‍ಚೌಕ ಜಿಲ್ಲೆಯ ಭೈರವಕುಂಡದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು.

ನೇಪಾಳದ ಪೂರ್ವ ಹಾಗೂ ಕೇಂದ್ರ ವಲಯ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಕಂಪನದ ಅನುಭವವಾಗಿದೆ. ನೆರೆಯ ಭಾರತ,ಚೀನಾ ಮತ್ತು ಟಿಬೆಟ್‍ ನ ಕೆಲ ಭಾಗಗಳಲ್ಲೂ ಭೂಕಂಪ ಸಂಭವಿಸಿದೆ. ಆರಂಭಿಕ ಮೌಲ್ಯಮಾಪನದ ಪ್ರಕಾರ, ತಕ್ಷಣಕ್ಕೆ ಯಾವುದೇ ಸಾವು ನೋವಿನ ವರದಿಗಳು ಬಂದಿಲ್ಲ ಹಾಗೂ ಯಾವುದೇ ರಾಚನಿಕ ಹಾನಿಯೂ ಆಗಿಲ್ಲ. ಆದಾಗ್ಯೂ ಸ್ಥಳೀಯ ಅಧಿಕಾರಿಗಳು ತೊಂದರೆಗೀಡಾದ ಪ್ರದೇಶಗಳಲ್ಲಿ ಪರಿಣಾಮವನ್ನು ಅವಲೋಕಿಸುತ್ತಿದ್ದಾರೆ.

See also  ರಾಜ್ಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬಡವರಿಂದ ಯದ್ವಾತದ್ವಾ ಹಣ ಪೀಕುತ್ತಿರುವ ಗ್ರಾಮ ವನ್ ಗಳು..!, ಸುಳ್ಯ ತಾಲೂಕಿನ ಬಡ ಜನರನ್ನು ಹಗಲು ದರೋಡೆ ಮಾಡುತ್ತಿರುವವರಿಗೆ ಕಡಿವಾಣ ಹಾಕೋದು ಯಾರು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget