ಕ್ರೈಂರಾಜ್ಯವೈರಲ್ ನ್ಯೂಸ್

ನಕಲಿ ವೈದ್ಯ ಅಬ್ದುಲ್ ನ ಫಾರ್ಮ್ ಹೌಸ್‌ ನಲ್ಲಿ ಹೂತಿಟ್ಟ ಭ್ರೂಣಗಳು ಪತ್ತೆ..! ಮಕ್ಕಳ ಮಾರಾಟ ಜಾಲದ ಕರಾಳತೆ ಕಂಡು ಬೆಚ್ಚಿಬಿದ್ದ ಪೊಲೀಸರು..!

262

ನ್ಯೂಸ್ ನಾಟೌಟ್: ಭ್ರೂಣ ಹತ್ಯೆ ಪ್ರಕರಣದ ಕರಾಳ ರೂಪ ಬೆಳಕಿಗೆ ಬಂದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಪೊಲೀಸರ ತನಿಖೆ ವೇಳೆ ಹೂತು ಹಾಕಿದ್ದ ಮೂರು ಭ್ರೂಣಗಳು ಪತ್ತೆಯಾಗಿದ್ದು, ಈ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

ಮಕ್ಕಳ ಮಾರಾಟ ಜಾಲದಲ್ಲಿ ಸಿಕ್ಕಿ ಬಿದ್ದಿರುವ ನಕಲಿ ವೈದ್ಯ ಅಬ್ದುಲ್ ಗಫಾತ್ ಲಾಡಖಾನ್‌ ಎಂಬಾತ ಭ್ರೂಣ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮಕ್ಕಳ ಮಾರಾಟ ಜಾಲದ ಪ್ರಕರಣವನ್ನು ಬೆನ್ನತ್ತಿರುವ ಬೆಳಗಾವಿ ಪೊಲೀಸರಿಗೆ ಬೆಚ್ಚಿಬಿಳಿಸುವ ಮಾಹಿತಿ‌ ಲಭ್ಯವಾಗಿದೆ. ಮಾತ್ರವಲ್ಲ ಭ್ರೂಣವನ್ನು ಹತ್ಯೆಗೈದು ತನ್ನ ಫಾರ್ಮ್ ಹೌಸ್‌ನಲ್ಲಿ ಹೂತು ಹಾಕಿದ್ದ ಎನ್ನಲಾಗಿದೆ.

ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಸೂಚನೆ ಮೇರೆಗೆ ಹೆಚ್ಚಿನ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದ್ದು, ಪೊಲೀಸರು, ಆರೋಗ್ಯ ಇಲಾಖೆ, ಎಫ್ ಎಸ್ ಎಲ್ ತಂಡ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಬಳಿ ಇರೋ ನಕಲಿ ವೈದ್ಯನ ಫಾರ್ಮ್ ಹೌಸ್ ಗೆ ಭೇಟಿ ನೀಡಿ ಹೂತು ಹಾಕಲಾಗಿದ್ದ ಮೂರು ಭ್ರೂಣಗಳನ್ನು ವಶಕ್ಕೆ ಪಡೆದಿದ್ದಾರೆ. ಜೂನ್ 10 ರಂದು ಮಾಳಮಾರುತಿ ಠಾಣೆ ಪೊಲೀಸರು ಮಕ್ಕಳ ಮಾರಾಟ ಜಾಲದಲ್ಲಿ ನಕಲಿ ವೈದ್ಯ ಸೇರಿ ಐವರನ್ನು ಬಂಧಿಸಿದ್ದರು. ಆ ಪ್ರಕರಣ ಬೆನ್ನತ್ತಿರುವ ಪೊಲೀಸರಿಗೆ 5 ದಿನದ ಬಳಿಕ ಈ ಕೃತ್ಯ ಬೆಳಕಿಗೆ ಬಂದಿದೆ.

See also  ತೆಲುಗಿನ ಖ್ಯಾತ ನಿರ್ದೇಶಕನಿಗೆ 3 ತಿಂಗಳು ಜೈಲು ಶಿಕ್ಷೆ..! ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ ಕೋರ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget