Latestಕರಾವಳಿಸುಳ್ಯ

ಸುಳ್ಯ:ಕಾರಣಿಕ ಕ್ಷೇತ್ರ  ಕೊರಂಬಡ್ಕ ಕೊರಗಜ್ಜ ದೈವಸ್ಥಾನದಲ್ಲಿ ನೇಮೋತ್ಸವ;ಊರ-ಪರವೂರ ಸಾವಿರಾರು ಭಕ್ತರು ಭಾಗಿ

366

ನ್ಯೂಸ್‌ ನಾಟೌಟ್: ಶ್ರೀ ನಾಗ ಬ್ರಹ್ಮ ಆದಿ ಮೋಗೇರ್ಕಳ ದೈವಸ್ಥಾನ, ಗುಳಿಗ ದೈವ , ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ವ್ಯವಸ್ಥಾಪನ ಆಡಳಿತ ಕಾರ್ಯ ಸೇವಾ ಸಮಿತಿ ಟ್ರಸ್ಟ್‌ ಇದರ ನೇತೃತ್ವದಲ್ಲಿ ದೈವಗಳ ಕಾಲಾವಧಿ ನೇಮೋತ್ಸವವು ಸುಳ್ಯ ಜಯನಗರದ ಕೊರಂಬಡ್ಕದಲ್ಲಿ ಜರುಗಿತು.

ಬೆಳಗ್ಗೆ ಗಣಪತಿ ಹೋಮ,ಸಂಜೆ ಶ್ರೀ ಗುಳಿಗ ದೈವದ ನೇಮ ಹಾಗೂ ದೀಪಾರಾಧನೆ ನಡೆಯಿತು.ಬಳಿಕ ಶ್ರೀ ನಾಗಬ್ರಹ್ಮ ದೇವರಿಗೆ ಮಹಾಪೂಜೆ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ,ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿದು , ಸತ್ಯದೇವತೆ ಶ್ರೀ ತನ್ನಿಮಾಣಿಗ ದೈವದ ನೇಮ,ಪಾತ್ರಿಗಳ ದರ್ಶನ ನಡೆಯಿತು. ಆ ನಂತರ ಬೆಳಗ್ಗೆ ಪ್ರಸಾದ ವಿತರಣೆ, ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.ಈ ವೇಳೆ ಕ್ಷೇತ್ರದ ಸಮಿತಿಯವರು ಸೇರಿದಂತೆ , ಊರ ಪರವೂರ ಭಕ್ತರು ಹಾಜರಿದ್ದು, ದೈವಗಳ ಕೃಪೆಗೆ ಪಾತ್ರರಾದರು.

 

 

View this post on Instagram

 

A post shared by News not out (@newsnotout)

See also  ಕಾಲೇಜಿಗೆ ಹೋಗುವ ಹಿಂದೂ ಹುಡುಗಿಯ ಬ್ಯಾಗ್‌ನಲ್ಲಿ ಮುಸ್ಲಿಂ ಹುಡುಗನ ಪ್ರೇಮ ಪತ್ರ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget