Latestನೆಲ್ಯಾಡಿ

ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಗುಡ್ಡ ಕುಸಿದು ಸಂಚಾರ ಸ್ಥಗಿತ, ಪರ್ಯಾಯ ರಸ್ತೆ ಬಳಸುವಂತೆ ಸೂಚನೆ

514

ನ್ಯೂಸ್‌ ನಾಟೌಟ್‌: ಕರಾವಳಿಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕಡಬದ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಗುರುವಾರ (ಜು.17) ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಂ. 75ರ ಹೆದ್ದಾರಿ ಬದಿಯ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿರುವುದರಿಂದ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಹೆದ್ದಾರಿಯ 2 ಬದಿಯಲ್ಲೂ ಗುಡ್ಡ ಕುಸಿತವಾದ ಪರಿಣಾಮ ಮಣ್ಣು ರಸ್ತೆ ಮೇಲೂ ಬಿದ್ದಿದ್ದೆ. ಈಗಾಗಲೇ ಮಣ್ಣು ತೆರವು ಕಾರ್ಯ ಆರಂಭವಾಗಿದ್ದು, ಮಧ್ಯಾಹ್ನದ ವೆರೆಗೆ ಕಾಮಗಾರಿ ನಡೆಯಲಿರುವ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಪರ್ಯಾಯ ರಸ್ತೆ ಬಳಸುವಂತೆ ಪೊಲೀಸರು ತಿಳಿಸಿದ್ದಾರೆ.

See also  ಸುಳ್ಯ: ಎಸ್ಎಸ್ಎಫ್ ಸುಳ್ಯ ಡಿವಿಷನ್ ನ ಆಂಬ್ಯುಲೆನ್ಸ್ ಲೋಕಾರ್ಪಣೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget