ಕ್ರೈಂ

ಗೋಳಿತೊಟ್ಟು: ಟಾಟಾ ಏಸ್ – ಸಿಲಿಂಡರ್ ಲಾರಿ ಡಿಕ್ಕಿ, ಓರ್ವ ಗಂಭೀರ

ನೆಲ್ಯಾಡಿ: ಟಾಟಾ ಏಸ್ ಹಾಗೂ ಸಿಲಿಂಡರ್‌ ಸಾಗಾಟದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಟಾಟಾ ಏಸ್ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತೊಟ್ಟು ಎಂಬಲ್ಲಿ ಸಂಭವಿಸಿದೆ.

ಅಂಚೆ ಇಲಾಖೆಯ ಟಾಟಾ ಏಸ್ ಗಾಡಿ ನೆಟ್ಟಣ, ಕಡಬ, ಅಲಂಕಾರು, ನೆಲ್ಯಾಡಿಯಿಂದ ಅಂಚೆ ಇಲಾಖೆಯ ಬ್ಯಾಗ್ ಕಲೆಕ್ಟ್ ಮಾಡಿಕೊಂಡು ಪುತ್ತೂರಿಗೆ ಹೋಗುತ್ತಿದ್ದ ವೇಳೆ ಸಿಲಿಂಡರ್ ಲಾರಿ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಟಾಟಾ ಏಸ್ ನೊಳಗೆ ಸಿಲುಕಿಕೊಂಡಿದ್ದ ಚಾಲಕ ರವಿ ಅವರನ್ನು ಹರಸಾಹಸ ಪಟ್ಟು ಗಾಡಿಯಿಂದ ಹೊರ ತೆಗೆಯಲಾಯಿತು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ.

Related posts

ತೊಡಿಕಾನ: ಆತ್ಮಹತ್ಯೆಗೆ ಶರಣಾದ ವ್ಯಕ್ತಿ, ಹಠಾತ್ ಆಗಿದ್ದೇನು..?

ಸಂಪಾಜೆ ದರೋಡೆ ಪ್ರಕರಣ: ಪೊಲೀಸರಿಗೆ ಸಿಕ್ಕಿತೆ ಸುಳಿವು..?

ಮಂಗಳೂರಲ್ಲಿ ಕಾರು-ಸ್ಕೂಟರ್‌ ಭೀಕರ ಅಪಘಾತ