ಕರಾವಳಿಕ್ರೈಂ

ನೆಲ್ಯಾಡಿ: ಕಾಡಿಗೆ ಕರೆದೊಯ್ದು ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕಿರಾತನಕ ವಿರುದ್ಧ POCSO ಪ್ರಕರಣ ದಾಖಲು

161

ನ್ಯೂಸ್ ನಾಟೌಟ್: ಕಾಲೇಜು ವಿದ್ಯಾರ್ಥಿಯನ್ನು ಪುಸಲಾಯಿಸಿ ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ಎಸಗಿರುವ ಪ್ರಕರಣ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಟ್ಲದ ನಿವಾಸಿ ಸತೀಶ್ (38 ವರ್ಷ) ಎಂಬಾತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಕಾಲೇಜೊಂದರ ವಿದ್ಯಾರ್ಥಿನಿಯನ್ನು ಜೂನ್ 14ರಂದು ಪುತ್ತೂರಿನಲ್ಲಿ ಸತೀಶ್ ಎಂಬಾತ ಪರಿಚಯ ಮಾಡಿಕೊಂಡಿದ್ದ. ಬಳಿಕ ಫೋನ್ ಮೂಲಕ ಆತ್ಮೀಯತೆ ಬೆಳೆಸಿಕೊಂಡಿದ್ದ.
ಜುಲೈ 21ರಂದು ಆಕೆಯನ್ನು ನೆಲ್ಯಾಡಿಗೆ ಬರಲು ಹೇಳಿದ್ದ. ಅಲ್ಲಿಂದ ಆಕೆಯನ್ನು ಪಿಕಪ್ ವಾಹನದಲ್ಲಿ ಬಜತ್ತೂರು ಗ್ರಾಮದ ಕಾಂಚನ ಎಂಬಲ್ಲಿನ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

See also  ಲೋಕಸಭಾ ಚುನಾವಣೆಗೆ ಟಿಕೆಟ್​ ಕೈತಪ್ಪಿದ ವಿಚಾರ,ಹುಟ್ಟು ಹಬ್ಬದಂದು ಅಚ್ಚರಿಯ ಹೇಳಿಕೆ;ಕಾಂಗ್ರೆಸ್​ ನಾಯಕರು ಸಂಪರ್ಕಿಸಿರೋದು ನಿಜ ಎಂದ ಮಾಜಿ ಮುಖ್ಯ ಮುಂತ್ರಿ ಡಿ.ವಿ.ಎಸ್‌.
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget