ಕರಾವಳಿಸುಳ್ಯ

ನೆಲ್ಯಾಡಿ: ಕಿವಿ ಕೇಳಿಸದ ಮಾತು ಬಾರದ ವ್ಯಕ್ತಿಗೆ ತಂಡದಿಂದ ಥಳಿತ, ಪುತ್ತೂರು ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್ : ಮಾತು ಬಾರದ ಕಿವಿ ಕೇಳಿಸದ ಕಾರ್ಮಿಕರೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತಂಡವೊಂದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಈ ಹಿನ್ನಲೆ ಕಾರ್ಮಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಪ್ರದೇಶ ಮೂಲದ ಲಡ್ಡು(34ವ) ಗಾಯಗೊಂಡಿರುವ ಕೂಲಿ ಕಾರ್ಮಿಕ .ಇವರು ನೆಲ್ಯಾಡಿ ಸೈಂಟ್ ಜಾರ್ಜ್ ಕಾಲೇಜು ಬಳಿ ಇರುವ ಸಿಮೆಂಟ್ ಇಟ್ಟಿಗೆ ತಯಾರಿಕ ಘಟಕವಾದ ನಯನ ಟ್ರೇಡರ್‍ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಅವರಿಗೆ ಕಿವಿ ಕೇಳಿಸುತ್ತಿಲ್ಲ ಹಾಗೂ ಮಾತು ಬಾರದವರೆಂದು ಘಟನೆಯನ್ನು ಹಿಂದಿಯಲ್ಲಿ ಬರೆದಿದ್ದಾರೆಂದು ವರದಿಯಾಗಿದೆ.‘ನಾನು ಸುಮಾರು 10 ವರ್ಷಗಳಿಂದ ನೆಲ್ಯಾಡಿ ವಿ ಜೆ ಜೋಸೆಪ್ ಅವರ ಮಾಲಕತ್ವದ ನಯನ ಟ್ರೇಡರ್‍ಸ್‌ನಲ್ಲಿ ಕೆಲಸ ಮಾಡುತ್ತಿದ್ದು,ಜೂ. 13ರಂದು ಬೆಳಿಗ್ಗೆ ಕೆಲಸ ಮುಗಿಸಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಮೋಹನ್, ಸದಾನಂದ್, ಶಿವಾನಂದ್, ವಾರಿಜ, ಪ್ರಕಾಶ್, ಉಮೇಶ್, ಮಂಜುಳ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.

Related posts

ಇಂದು (ಜು.೧೭) ಹಾಗೂ ನಾಳೆ (ಜು.೧೮) ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ

ಸಾಮಾಜಿಕ ಜಾಲತಾಣದಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಮುಖಂಡರ ತೇಜೋವಧೆ ಆರೋಪ! ರಾತ್ರಿ ವೇಳೆ ಬಿಜೆಪಿ ಪರ ಕಾಂಗ್ರೆಸ್ ಮುಖಂಡರಿಂದ ಪ್ರಚಾರ!?

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಕೃತ್ಯಕ್ಕೆ ಸಹಕರಿಸಿದವರು ನಿರೀಕ್ಷಣಾ ಮಂದಿರಕ್ಕೆ