ಕ್ರೈಂ

ನೆಲ್ಯಾಡಿ: ಕಟ್ಟಡ ನಾಶ, ಪ್ರಶ್ನಿಸಿದ ಮಾಲೀಕನಿಗೆ ಹಲ್ಲೆ, ಬೆದರಿಕೆ

742

ನೆಲ್ಯಾಡಿ:  ಕಟ್ಟಡವೊಂದನ್ನು ನಾಶಪಡಿಸಿದ್ದಲ್ಲದೆ ಆ ಕಟ್ಟಡ ಮಾಲೀಕರಿಗೆ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದ್ದು ಈ ಕುರಿತಂತೆ ಪೊಲೀಸ್ ದೂರು ನೀಡಲಾಗಿದೆ. ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ಇದೀಗ ವಿಚಾರಣೆ ಆರಂಭಿಸಿದ್ದಾರೆ.

ಏನಿದು ಗಲಾಟೆ?

ಸೈಂಟ್‌ ತೋಮಸ್ ಇಲೆಕ್ಟ್ರಿಕಲ್ಸ್  ಸಂಸ್ಥೆಯ ಮಾಲಕ ಜೋಯಿ ತೋಮಸ್ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ ವ್ಯಕ್ತಿ. ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ರಸ್ತೆಗೆ ಮಣ್ಣು ಹಾಕಿ ಎತ್ತರಿಸಿದಾಗ ನಮ್ಮ ಕಟ್ಟಡದ ಕೋಣೆಗಳ ಮುಂಭಾಗದಲ್ಲಿ ಮಣ್ಣು ಎತ್ತರಕ್ಕೆ ಬಿದ್ದಿದೆ. ಎ.೩ರಂದು ರಾತ್ರಿ ಸುಮಾರು ೮ ಗಂಟೆಗೆ ಪಕ್ಕದ ಜಮಾಲಿಯ ಕಾಂಪ್ಲೆಕ್ಸ್ ಕಟ್ಟಡದ ಮಾಲಕ  ಅಬೂಬಕ್ಕರ್ ಸಿದ್ದೀಕ್, ಅಬ್ದುಲ್ ಗಫಾರ್ ಮತ್ತು ಸನಾವುದ್ದೀನ್ ನನ್ನ ಕಟ್ಟಡದ ಕೋಣೆಯ ಶಟರ್ ಮುರಿದು ಹಾನಿಗೊಳಿಸಿ ಕೋಣೆಯಲ್ಲಿದ್ದ ಸಾಮಾಗ್ರಿಗಳನ್ನು ನಾಶ ಮಾಡಿದ್ದಾರೆ. ವಿಚಾರಿಸಲು ಹೋದ ವೇಳೆ  ನನ್ನ ಮೇಲೆಯೂ ಹಲ್ಲೆ ನಡೆದಿದ್ದು ನನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

See also  ಸುಳ್ಯ: ಬೆಂಕಿ ಎಂದು ಹೆದರಿದ ಜನ..! ಏನಿದು ಘಟನೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget