ನ್ಯೂಸ್ ನಾಟೌಟ್: ತನ್ನ ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಹೋಗುತ್ತಿದ್ದೇನೆಂದು ಮನೆಯವರಿಗೆ ಹೇಳಿ ಹೋದ ಗೋಳಿತೊಟ್ಟುವಿನ ಆಟೋ ರಿಕ್ಷಾ ಚಾಲಕ ನಾಪತ್ತೆಯಾಗಿ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಮೃತರನ್ನು ಗಗನ್ (19 ವರ್ಷ) ಎಂದು ಗುರುತಿಸಲಾಗಿದೆ.
ಮಾರ್ಚ್ 10 ರಂದು ಯುವಕ ಗೋಳಿತೊಟ್ಟಿನಿಂದ ಮನೆಗೆ ಕರೆ ಮಾಡಿ ನೆಲ್ಯಾಡಿ ಕಡೆಗೆ ಬಾಡಿಗೆ ಇದೆ ಎಂದು ಹೇಳಿ ಹೊರಟಿದ್ದ. ಇದೀಗ ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಮಾರ್ಚ್ 10 ರಾತ್ರಿಯಿಂದಲೇ ಯುವಕನ ಹುಡುಕಾಟವನ್ನು ಮನೆಯವರು, ಸಂಬಂಧಿಕರು, ಸ್ನೇಹಿತರು ನಡೆಸಿದ್ದರು. ಎಲ್ಲೂ ಸಿಕ್ಕಿರಲಿಲ್ಲ. ಮಾರ್ಚ್ 11ರ ಸಂಜೆ ತನಕ ಹುಡುಕಾಟ ನಡೆಸಿದಾಗ ನೇತ್ರಾವತಿ ನದಿ ತಟದಲ್ಲಿ ಆತನ ರಿಕ್ಷಾ ಪತ್ತೆಯಾಗಿತ್ತು. ರಿಕ್ಷಾದಲ್ಲಿ ಆತನ ಪರ್ಸ್ ಸಿಕ್ಕಿದೆ. ಆದರೆ ಮೊಬೈಲ್ ಫೋನ್ ಸಿಕ್ಕಿಲ್ಲ. ಯುವಕನಿಗೆ ಯಾವುದೇ ದುಶ್ಚಟಗಳಿರಲಿಲ್ಲ. ಹೀಗಾಗಿ ಮನೆಯವರು ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪುತ್ತೂರಿಗೆ ಕಳುಹಿಸಿ ಕೊಡಲಾಗಿದೆ.