ಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

ನೇಹಾ ಕೊಲೆ ಆರೋಪಿಯನ್ನು ಜನಸಾಮಾನ್ಯರ ಕೈಗೊಪ್ಪಿಸಿ ಎಂದ ನಟಿ ರಚಿತಾ ರಾಮ್‌, ಸರ್ಕಾರಕ್ಕೆ ನಟಿ ಮಾಡಿದ ಇನ್ನೊಂದು ಮನವಿ ಏನು..?

252

ನ್ಯೂಸ್ ನಾಟೌಟ್: ಹುಬ್ಬಳ್ಳಿ ನೇಹಾ ಹಿರೇಮಠ್‌ (Neha Hiremath) ಹತ್ಯೆ ಪ್ರಕರಣದ ಕುರಿತು ನಟಿ ರಚಿತಾ ರಾಮ್‌ (Rachita Ram) ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಗಾರನಿಗೆ ತಕ್ಕ ಶಿಕ್ಷೆ ಆಗಬೇಕು ಆದರೆ, ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದಿದ್ದಾರೆ.

ಪ್ರಕರಣ ಕುರಿತು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಹಾಕಿರುವ ರಚಿತಾ ರಾಮ್‌, ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದಿದ್ದಾರೆ. ಜಾತಿ, ಧರ್ಮ ಯಾವುದೇ ಆಗಿರಲಿ. ಮೊದಲು ನಾವು ಮಾನವರು. ನಾನು ಈ ಪೋಸ್ಟ್‌ ಹಾಕಲು ಕಾರಣ ಆಕೆಗೆ (ನೇಹಾ) ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಕ್ಕೆ ನನ್ನ ಒಂದು ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ #wewantjustice ಎಂದು ಟ್ಯಾಗ್‌ ಹಾಕಿ ನೇಹಾಗೆ ರಚಿತಾ ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ.

See also  ಖ್ಯಾತ ಕಿರುತೆರೆ ನಟಿ ಸಾವು..! ಕಾರು ಅಪಘಾತದ ಸುತ್ತ ಹಲವು ಅನುಮಾನ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget