ಕರಾವಳಿ

‘ಹಣಕ್ಕೆ ಆಸೆ ಪಟ್ಟು ಕೆಟ್ಟ ಪಾತ್ರ, ಸಿನಿಮಾಗಳನ್ನ ಮಾಡಿಬಿಟ್ಟೆ, ಈಗ ನಂಗೆ ಅಸಹ್ಯ ಆಗ್ತಿದೆ’ , ಮುಂಬೈಗೆ ಬಂದ ನಟಿಗೆ ಆಗಿದ್ದೇನು..? ಅನುಭವ ತೆರದಿಟ್ಟ ಖ್ಯಾತ ನಟಿ

229

ನ್ಯೂಸ್ ನಾಟೌಟ್: ಸಿನಿಮಾ ಇಂಡಸ್ಟ್ರಿ ಅಂದ ಮೇಲೆ ಅಲ್ಲೊಂದು ಸಮ್ ಥಿಂಗ್ ಸ್ಪೆಶಲ್ ಇದ್ದೇ ಇರುತ್ತದೆ. ಅದರಲ್ಲೂ ನಟಿಯನ್ನು ಕೆಲವರು ಕೆಟ್ಟದಾಗಿ ನಡೆಸಿಕೊಳ್ತಾರೆ ಅನ್ನುವ ಮಾತುಗಳು ಆಗಾಗ್ಗೆ ಕೇಳಿ ಬಂದಿವೆ. ಈ ನಡುವೆ ಖ್ಯಾತ ನಟಿಯೊಬ್ಬರು ‘ಹಣಕ್ಕೆ ಆಸೆ ಪಟ್ಟು ಕೆಟ್ಟ ಪಾತ್ರ, ಸಿನಿಮಾಗಳನ್ನ ಮಾಡಿಬಿಟ್ಟೆ, ಈಗ ನಂಗೆ ಅಸಹ್ಯ ಆಗ್ತಿದೆ’ ಅಂತ ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ.


ನಾನು ಕೆಲಸ ಅರಸಿಕೊಂಡು ಮುಂಬೈಗೆ ದಿಲ್ಲಿಯಿಂದ ಬಂದೆ. ಆದರೆ ಮುಂಬೈ ನನಗೆ ಯಾಕೋ ಹಿಡಿಸಲೇ ಇಲ್ಲ. ಮುಂಬೈ ಬಿಟ್ಟು ಮರಳಿ ದಿಲ್ಲಿಗೆ ಹೋಗಿ ನನ್ನ ಪಿಚ್ ಡಿ ಅಧ್ಯಯನ ಮುಂದುವರಿಸಬೇಕು ಅಂದುಕೊಂಡಿದ್ದೆ. ಆದರೆ ಈ ನಗರ ನನ್ನನ್ನು ಕೈ ಬಿಡಲಿಲ್ಲ. ಆರಂಭದಲ್ಲಿ ನನಗೆ ತುಂಬಾ ಹಣದ ಅವಶ್ಯಕತೆ ಇತ್ತು. ನನಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ಕೆಟ್ಟ ಸಿನಿಮಾ, ಕೆಟ್ಟ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಈ ಸಿನಿಮಾಗಳು ತೆರೆ ಕಾಣುವ ಮೊದಲು ಇದು ತೆರೆಗೆ ಬಾರದಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೆ ಎಂದು ನಟಿ ನೀನಾ ಗುಪ್ತಾ ತಿಳಿಸಿದ್ದಾರೆ.

1982ರಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ನೀನಾ ಗುಪ್ತಾ ಹೆಚ್ಚು ಆಕ್ಟೀವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲು ನಟಿಯಾಗಿ ಗುರುತಿಸಿಕೊಂಡಿದ್ದ ಅವರು ಇದೀಗ ಪೋಷಕ ಪಾತ್ರಗಳಲ್ಲೂ ನಟಿಸುತ್ತಿದ್ದಾರೆ. ಮೇ 28ರಂದು ಇವರು ಅಭಿನಯಿಸಿದ ‘ಪಂಚಾಯತ್ 3’ ವೆಬ್ ಸೀರೀಸ್ ರಿಲೀಸ್ ಆಗಲಿದೆ.

See also  ಕಡಬ: ಅಪ್ರಾಪ್ತ ಪುತ್ರನಿಗೆ ಬೈಕ್ ಕೊಟ್ಟು 20 ಸಾವಿರ ದಂಡ ತೆತ್ತ ತಂದೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget