ನ್ಯೂಸ್ ನಾಟೌಟ್ : ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಎನ್.ಸಿ.ಸಿ ಹಿರಿಯ ವಿದ್ಯಾರ್ಥಿ ಪ್ರದ್ಯುಮ್ನ ಯು.ವಿ. ಇವರು 2024ನೇ ಸಾಲಿನಲ್ಲಿ ಯು.ಪಿ.ಎಸ್.ಸಿ. ನಡೆಸಿದ ಸಿ.ಡಿ.ಎಸ್ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಯಸ್.ಯಸ್.ಬಿ. ಸಂದರ್ಶನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 14ನೇ ರ್ಯಾಂಕ್ ಪಡೆದು ಭಾರತೀಯ ನೌಕಾಸೇನಾ ಅಕಾಡೆಮಿಗೆ ಆಯ್ಕೆ ಆಗಿದ್ದಾರೆ.
ಇವರು ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ 2018-19 ಬ್ಯಾಚ್ ನ ವಿದ್ಯಾರ್ಥಿಯಾಗಿದ್ದಾರೆ.ಇವರಿಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಶಿಕ್ಷಕ ವೃಂದ ಕಾಲೇಜಿನ ಎನ್‌ಸಿಸಿ ಅಧಿಕಾರಿ ಮತ್ತು ಎನ್‌ಸಿಸಿ ಕ್ಯಾಡೆಟ್ ಗಳು ಹೆಮ್ಮೆಯಿಂದ ಶುಭ ಕೋರಿದ್ದಾರೆ.