ಕ್ರೈಂವೈರಲ್ ನ್ಯೂಸ್ಸಿನಿಮಾ

ಕಾಪಿರೈಟ್ ಪ್ರಕರಣದಲ್ಲಿ ಲೇಡಿ ಸೂಪರ್ ಸ್ಟಾರ್ ಗೆ ಹಿನ್ನಡೆ..! ನಟ ಧನುಷ್ ಮತ್ತು ನಟಿ ನಯನತಾರಾ ನಡುವಿನ ಹಗ್ಗಜಗ್ಗಾಟಕ್ಕೆ ಮದ್ರಾಸ್ ಹೈಕೋರ್ಟ್ ನಿಂದ ಪೂರ್ಣವಿರಾಮ..!

229

ನ್ಯೂಸ್ ನಾಟೌಟ್: ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಮತ್ತು ಕಾಲಿವುಡ್ ನಟ ಧನುಷ್ ನಡುವಿನ ಕಾಪಿರೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನಯನತಾರಾಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ.

ಈ ಹಿಂದೆ ನೆಟ್‌ ಫ್ಲಿಕ್ಸ್ ನಲ್ಲಿ ಪ್ರಸಾರವಾದ ನಯನತಾರಾ ಅವರ ಜೀವನದ ಕುರಿತ ಸಾಕ್ಷ್ಯಚಿತ್ರ ‘ನಯನತಾರಾ ಬಿಯಾಂಡ್ ದಿ ಫೇರಿ ಟೇಲ್’ ನಲ್ಲಿ ನಟ ಧನುಷ್ ನಿರ್ಮಾಣದ ‘ನಾನುಮ್ ರೌಡಿ ದಾನ್’ (ನಾನೂ ರೌಡಿನೇ) ಚಿತ್ರದ ಕ್ಲಿಪ್ ಗಳನ್ನು ನಿರ್ಮಾಣ ಸಂಸ್ಥೆಯ ಅನುಮತಿ ಇಲ್ಲದೇ ಬಳಸಿಕೊಳ್ಳಲಾಗಿತ್ತು ಎಂದು ನಟಿಯ ವಿರುದ್ಧ ಆರೋಪ ಮಾಡಲಾಗಿತ್ತು. ಇದರ ವಿರುದ್ಧ ನಟ ಧನುಷ್ ಕಾನೂನು ಸಮರ ಸಾರಿದ್ದರು. ಈ ವಿಚಾರ ನಟ ಧನುಷ್ ಮತ್ತು ನಟಿ ನಯನತಾರಾ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಇದೀಗ ಈ ಕಾನೂನು ಸಮರದಲ್ಲಿ ನಟ ಧನುಷ್ ಮುನ್ನಡೆ ಸಾಧಿಸಿದ್ದಾರೆ.

ಈ ಪ್ರಕರಣದಲ್ಲಿ ನೆಟ್ ಫ್ಲಿಕ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಇದರಿಂದ ನಯನತಾರಾ ಕಾನೂನು ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ. ಈ ಹಿಂದೆ ನೆಟ್ ಫ್ಲಿಕ್ಸ್ ಸಂಸ್ಥೆ ನಟ ಧನುಷ್ ಸಲ್ಲಿಸಿದ್ದ ಹಕ್ಕುಸ್ವಾಮ್ಯ ಮೊಕದ್ದಮೆಯನ್ನು ತಿರಸ್ಕರಿಸುವಂತೆ ನೆಟ್‌ ಫ್ಲಿಕ್ಸ್ ಇಂಡಿಯಾ, ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಇಂದು(ಜ.28) ಅವರ ಅರ್ಜಿಯನ್ನು ವಜಾಗೊಳಿಸಿದೆ. ಇನ್ನು ಮುಂದೆ ನಟಿ ನಯನತಾರಾ ಕಾನೂನು ಸಮರ ಮುಂದುವರಿಸಲಿದ್ದಾರೆ ಎನ್ನಲಾಗಿದೆ.

Click

https://newsnotout.com/2025/01/finance-company-kannada-news-teacher-d/
https://newsnotout.com/2025/01/bengaluru-dating-app-viral-news-marriage-d/
https://newsnotout.com/2025/01/gisar-kannada-news-police-case-twist-viral-news-d/
https://newsnotout.com/2025/01/key-pad-mobile-phone-issue-hospital-hjd/
https://newsnotout.com/2025/01/tiger-issue-viral-news-kerala-viral-news-df/
https://newsnotout.com/2025/01/modi-and-trup-call-conversation-kannada-news-white-house/
See also  ಜಾಮೀನು ಸಿಕ್ಕ ತಕ್ಷಣ ಹೀರೋಗಳ ರೀತಿ ರೋಡ್ ಶೋ ಮಾಡಿದ ಅತ್ಯಾಚಾರ ಆರೋಪಿಗಳು..! 5 ಕಾರು,20ಕ್ಕೂ ಹೆಚ್ಚು ಹಿಂಬಾಲಕರೊಂದಿಗೆ ಮೆರವಣಿಗೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget