ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ನಕ್ಸಲರ ಎನ್‌ ಕೌಂಟರ್ ವೇಳೆ ಪೊಲೀಸ್ ಸಿಬ್ಬಂದಿ ಸಾವು..! 4 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು..!

ನ್ಯೂಸ್ ನಾಟೌಟ್ : ಛತ್ತೀಸಗಢದ ಬಸ್ತಾರ್‌ ಪ್ರದೇಶದಲ್ಲಿ ನಡೆದ ಎನ್‌ ಕೌಂಟರ್‌ ನಲ್ಲಿ ನಾಲ್ವರು ನಕ್ಸಲರು ಹತ್ಯೆಯಾಗಿದ್ದು, ಒಬ್ಬ ಪೊಲೀಸ್‌ ಹೆಡ್‌ ಕಾನ್‌ ಸ್ಟೆಬಲ್ ಮೃತಪಟ್ಟಿದ್ದಾರೆ ಎಂದು ಭಾನುವಾರ(ಜ.5) ಅಧಿಕಾರಿಗಳು ತಿಳಿಸಿದ್ದಾರೆ.

ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‌ ಮದ್‌ ಅರಣ್ಯದಲ್ಲಿ ಶನಿವಾರ ಸಂಜೆ ಭದ್ರತಾ ಸಿಬ್ಬಂದಿ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಗುಂಡಿನ ಚಕಮಕಿ ನಿಂತಿದ್ದು, ಸ್ಥಳದಿಂದ ನಾಲ್ವರು ನಕ್ಸಲೀಯರ ಮೃತದೇಹಗಳು, ಎಕೆ-47 ರೈಫಲ್ ಮತ್ತು ಸ್ವಯಂ ಲೋಡಿಂಗ್ ರೈಫಲ್ (SLR) ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸನ್ನು ಕರಮ್ ಮೃತ ಹೆಡ್ ಕಾನ್‌ಸ್ಟೆಬಲ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Click

https://newsnotout.com/2025/01/mobile-charging-kannada-news-mother-and-son-kannada-news-d/
https://newsnotout.com/2025/01/15-year-old-girl-nomore-by-cenring-wood-issue-bengaluru/
https://newsnotout.com/2025/01/kannada-news-video-and-issue-husband-and-wife-kannada-news-s/
https://newsnotout.com/2025/01/40-lakh-rupees-goss-profit-for-pani-puri-man-k/
https://newsnotout.com/2025/01/lion-bone-kannada-news-lover-boy-misbehgaviour-s/
https://newsnotout.com/2025/01/marriage-and-love-conflict-with-family-kannada-news-d/

Related posts

ನವಜಾತ ಶಿಶುವನ್ನು ಮಾರಾಟ ಮಾಡಿದ ತಾಯಿ,ಸೇಲ್ ಆಗಿದ್ದ ಕಂದಮ್ಮನನ್ನು ರಕ್ಷಿಸಿದ ಪೊಲೀಸರು

ಮಾರಕಾಸ್ತ್ರ ತೋರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ಯಾರು..? 14, 16 ವರ್ಷದ ಬಾಲಕರ ಬಗ್ಗೆ ಪೊಲೀಸರು ಹೇಳಿದ್ದೇನು?

‘ಅತ್ತೆ’ ಕಾನೂನು ಪ್ರಕಾರ ಅಳಿಯನ ಉತ್ತಾರಾಧಿಕಾರಿ ಅಲ್ಲದಿದ್ದರೂ ಅತ್ತೆಗೂ ಕೊಡಬೇಕು ಪರಿಹಾರ: ಸುಪ್ರೀಂ ಕೋರ್ಟ್