ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪೊಲೀಸ್ ಮಾಹಿತಿದಾರನೆಂದು ನಂಬಿಸಿ ನಕ್ಸಲರಿಂದ ಗ್ರಾಮಸ್ಥನ ಕೊಲೆ..! ಕಳೆದೊಂದು ವರ್ಷದಲ್ಲಿ ನಕ್ಸಲ್ ಹಿಂಸಾಚಾರಕ್ಕೆ ಆ ಪ್ರದೇಶದಲ್ಲಿ 68 ನಾಗರಿಕರು ಬಲಿ..!

ನ್ಯೂಸ್ ನಾಟೌಟ್: ಪೊಲೀಸ್ ಮಾಹಿತಿದಾರನೆಂದು ನಂಬಿಸಿ ವ್ಯಕ್ತಿಯೊಬ್ಬರನ್ನು ನಕ್ಸಲರು ಕೊಂದು ಹಾಕಿದ ಘಟನೆ ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದ್ದಾಗಿ ಪೊಲೀಸರು ಶುಕ್ರವಾರ(ಜ.17) ಮಾಹಿತಿ ನೀಡಿದ್ದಾರೆ.

ಸುಕ್ಕೂ ಹಪ್ಕಾ ಎಂಬವರು ನಕ್ಸಲರಿಂದ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಿರ್ತುರ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಹಲ್ಲೂರು ಗ್ರಾಮದ ಮನೆಯಿಂದ ಸುಕ್ಕೂ ಎಂಬವರನ್ನು ಗುರುವಾರ ಅಪಹರಿಸಿದ್ದ ನಕ್ಸಲರು ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಪ್ರಾಥಮಿಕ ಮಾಹಿತಿ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಸಮೀಪದಲ್ಲೇ ಶವವನ್ನು ಎಸೆಯಲಾಗಿದೆ. ಶುಕ್ರವಾರ ಬೆಳಿಗ್ಗೆ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಕೊಲೆಯಾದ ವ್ಯಕ್ತಿ ಪೊಲೀಸ್ ಮಾಹಿತಿದಾರನಾಗಿದ್ದರಿಂದ ಕೊಲೆ ಮಾಡಲಾಗಿದೆ ಎಂದು ಬರೆಯಲಾಗಿದ್ದ ಕರಪತ್ರವೂ ಲಭಿಸಿದೆ. ಭೈರಮಗಢ ಮಾವೋವಾದಿ ಪ್ರದೇಶ ಸಮಿತಿಯ ಕರಪತ್ರ ಅದಾಗಿತ್ತು ಎಂದು ಗೊತ್ತಾಗಿದೆ.

ಕೊಲೆಗಾರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ನಕ್ಸಲ್ ಹಿಂಸಾಚಾರಕ್ಕೆ ಬಸ್ತಾರ್ ಪ್ರದೇಶದಲ್ಲಿ 68 ನಾಗರಿಕರು ಬಲಿಯಾಗಿದ್ದಾರೆ.

Click

https://newsnotout.com/2025/01/kannada-news-bus-stop-rickshaow-driver-theft/
https://newsnotout.com/2025/01/software-engineer-arrested-kannada-news-viral-news-f/
https://newsnotout.com/2025/01/13-year-old-boy-got-abused-y-teacher-during-2016-to-2020/
https://newsnotout.com/2025/01/america-white-house-kannad-anews-8-year-jail-d/
https://newsnotout.com/2025/01/forest-department-investigation-kannada-news-5-to-6-hour/
https://newsnotout.com/2025/01/mangaluru-scooter-and-tempo-collision-kannada-news-man-nomore/
https://newsnotout.com/2025/01/darshan-thugudeepa-and-gang-kannada-news-supreme-court/
https://newsnotout.com/2025/01/imbran-khan-kannada-news-and-his-wife-got-sentence/

Related posts

ರಾಜಿಯಾದ ಮಾತ್ರಕ್ಕೆ ಲೈಂಗಿಕ ಕಿರುಕುಳ ಕೇಸ್‌ ರದ್ದು ಮಾಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್..! ಶಿಕ್ಷಕನ ವಿರುದ್ಧ ಕಾನೂನು ಕ್ರಮಕ್ಕೆ ಆದೇಶ..!

ಉಡುಪಿ: ಕೂಡಲೇ ಶರಣಾಗಿ ಇಲ್ಲದಿದ್ರೆ ಕಾರ್ಯಾಚರಣೆ ತೀವ್ರಗೊಳಿಸ್ತೇವೆ ಎಂದು ಕಾಡಲ್ಲಿ ಅವಿತಿರುವ ನಕ್ಸಲರಿಗೆ ಡಿಜಿಪಿ ಎಚ್ಚರಿಕೆ..! ವಿಕ್ರಂ ಗೌಡ ಎನ್‌ ಕೌಂಟರ್ ಬಳಿಕ ಚುರುಕುಗೊಂಡ ಕಾರ್ಯಾಚರಣೆ..!

ಹಳಿ ತಪ್ಪಿದ ರೈಲು, ಕಳಚಿದ 7 ಬೋಗಿಗಳು..! 40 ರೈಲುಗಳ ಸಂಚಾರ ರದ್ದು..!