ಕ್ರೈಂದೇಶ-ವಿದೇಶವೈರಲ್ ನ್ಯೂಸ್

ನವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ್ದ 17ರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ..! ಕೃತ್ಯದ ಬಳಿಕ ಆಕೆಯ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿ..!

ನ್ಯೂಸ್ ನಾಟೌಟ್: ನವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಗುಜರಾತ್‌ ನ ಸೂರತ್‌ ಜಿಲ್ಲೆಯಲ್ಲಿ ಮಂಗಳವಾರ(ಅ.8) ನಡೆದಿದೆ.

ಮೊಟಾ ಬೊರ್ಸಾರಾ ಗ್ರಾಮದ ಹೊರವಲಯದಲ್ಲಿ ಈ ಕೃತ್ಯ ನಡೆದಿದೆ.
‘ಟ್ಯೂಷನ್‌ ಮುಗಿಸಿದ ಬಾಲಕಿ ತನ್ನ ಸ್ನೇಹಿತೆಯರೊಂದಿಗೆ ನವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಳು. ರಾತ್ರಿ ಸುಮಾರು 10.30ರ ಹೊತ್ತಿಗೆ ಸ್ನೇಹಿತೆಯರೊಂದಿಗೆ ಮನೆಗೆ ಹೊರಡುತ್ತಿದ್ದ ಸಂದರ್ಭದಲ್ಲಿ ಮೂವರು ಪುರುಷರು ಆಕೆಯನ್ನು ಹಿಡಿದುಕೊಂಡಿದ್ದಾರೆ. ನಂತರ ಅತ್ಯಾಚಾರವೆಸಗಿ, ಅವರ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಎಸಗಿದ ಮೂವರು ಶಂಕಿತರಲ್ಲಿ ಇಬ್ಬರನ್ನು ಗುರುತಿಸಲಾಗಿದೆ. ಇವರ ಪತ್ತೆಗೆ ಬಲೆ ಬೀಸಲಾಗಿದೆ. ಘಟನೆ ನಂತರ ಬಾಲಕಿ ಸ್ಥಳೀಯರ ನೆರವಿನೊಂದಿಗೆ ತನ್ನ ಮನೆಗೆ ವಿಷಯ ಮುಟ್ಟಿಸಿದ್ದಾಳೆ. ಅದೇ ಸಂದರ್ಭದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.

Related posts

ತರಗತಿಯ ಕೊಠಡಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ ಪ್ರಾಧ್ಯಾಪಕಿ..! ಪ್ರಾಂಶುಪಾಲರಿಂದ ಶಿಕ್ಷಕಿಗೆ ಕಿರುಕುಳ ಆರೋಪ..!

ಐವರ್ನಾಡು: ಹಠಾತ್ ಕಾಡು ಹಂದಿ ಅಡ್ಡ ಬಂದು ಬೈಕ್ ಪಲ್ಟಿ..! ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯ, ನಿನ್ನೆ ರಾತ್ರಿ ನಡೆದಿದ್ದೇನು..?

ಪಂಚಭೂತಗಳಲ್ಲಿ ಲೀನನಾದ ಕನ್ನಡದ ಪ್ರಚಂಡ ಕುಳ್ಳ..! ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ