ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ನವರಾತ್ರಿ ಸಂಭ್ರಮದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ..! ಇಲ್ಲಿದೆ ವೈರಲ್ ವಿಡಿಯೋ

242

ನ್ಯೂಸ್ ನಾಟೌಟ್: ದಸರಾ ನವರಾತ್ರಿ ಹಬ್ಬದ 9 ದಿನಗಳಲ್ಲಿ ನವ ದುರ್ಗೆಯರ ಪೂಜೆಯ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನವರಾತ್ರಿ ಉತ್ಸವದ ವೇಳೆ ಖ್ಯಾತ ಕಲಾವಿದರೊಬ್ಬರು ಗರ್ಬಾ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಗರ್ಬಾ ಕಿಂಗ್ ಎಂದೇ ಖ್ಯಾತರಾಗಿದ್ದ ಖ್ಯಾತ ಕಲಾವಿದ ಅಶೋಕ್ ಮಾಲಿ (54) ಸೋಮವಾರ(ಅ.7) ಪುಣೆ ಜಿಲ್ಲೆಯ ಖೇಡ್‌ನಲ್ಲಿ ನವರಾತ್ರಿ ಉತ್ಸವದ ವೇಳೆ ಗರ್ಬಾ ಪ್ರದರ್ಶನ ಮಾಡುವಾಗ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಶೋಕ್ ಮಾಲಿ ಗರ್ಭಾ ನೃತ್ಯ ಮಾಡುವುದನ್ನು ಕಾಣಬಹುದು. ಅವರೊಂದಿಗೆ ಮತ್ತೊಬ್ಬ ಬಾಲಕ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆದರೆ ಡ್ಯಾನ್ಸ್ ಮಾಡುತ್ತಿದ್ದ ಅಶೋಕ್ ಏಕಾಏಕಿ ಕುಸಿದು ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ತಕ್ಷಣ ಕಲಾವಿದನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.ಪ್ರಕರಣ ದಾಖಲಾಗಿದೆ.

See also  ಮನೆ ಮುಂದಿರುವ ತುಳಸಿ ಕಟ್ಟೆಗಳು ಶಿಲುಬೆಗಳಾಗಿ ಬದಲಾಗುತ್ತಿವೆ ಎಂದದ್ದೇಕೆ ಬಿವೈ ರಾಘವೇಂದ್ರ..? ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಗೆ ಸಂಸದರ ಆಕ್ರೋಶ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget