ಕರಾವಳಿ

ಭೀಕರ ರಸ್ತೆ ಅಪಘಾತ,ಶಬರಿಮಲೆ ಯಾತ್ರಾರ್ಥಿಗಳ ವಾಹನ- ರಿಕ್ಷಾ ಡಿಕ್ಕಿ: ಮಕ್ಕಳು ಸೇರಿದಂತೆ ಐವರು ಮೃತ್ಯು

168

ನ್ಯೂಸ್ ನಾಟೌಟ್ :ಟೆಂಪೋ ಟ್ರಾವೆಲರ್ ಮತ್ತು ಆಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ.ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದು,ಈ ದುರ್ಘಟನೆ ಕೇರಳದ ಮಂಚೇರಿಯಲ್ಲಿ ನಡೆದಿದೆ.

ಆಟೋ ರಿಕ್ಷಾ ಚಾಲಕ ಅಬ್ದುಲ್ ಮಜೀದ್ (50) ಸೇರಿದಂತೆ ಪ್ರಯಾಣಿಕರಾದ ಥೆಸ್ಲೀಮಾ (34) ಮುಹ್ಸಿನಾ (32) ಮತ್ತು ಅವರ ಮಕ್ಕಳಾದ ರೈಹಾ ಫಾತಿಮಾ (4) ಮತ್ತು ರಿನ್ಶಾ ಫಾತಿಮಾ (7)ಮೃತಪಟ್ಟವರೆಂದು ತಿಳಿದು ಬಂದಿದೆ.

ಕರ್ನಾಟಕದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿದ್ದ ಟೆಂಪೋ ಟ್ರಾವೆಲರ್ ಮಂಚೇರಿ ಬಳಿ ಆಟೋ ರಿಕ್ಷಾದೊಂದಿಗೆ ಮುಖಾಮುಖಿಯಾಗಿದೆ ಎಂದು ಅವರು ಹೇಳಿದ್ದಾರೆ.ಘಟನೆಯಲ್ಲಿ ಐವರು ಶಬರಿಮಲೆ ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

See also  ಕಾಂಗ್ರೆಸ್ ಬೆಂಬಲಿಸಿದರೆ ಮತೀಯವಾದಿಗಳು ವಿಜೃಂಭಿಸುತ್ತಾರೆ! ಮತ್ತೊಂದು ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ಆಗಲು ಬಿಡಬಾರದು ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಕರೆ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget