ಕರಾವಳಿ

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಡಿತಗೊಳ್ಳುವ ಭೀತಿ

ನ್ಯೂಸ್ ನಾಟೌಟ್: ಮಡಿಕೇರಿ-ಮಂಗಳೂರು ರಸ್ತೆ ಕೊಯನಾಡಿನಲ್ಲಿ ಸಂಪರ್ಕ ಕಡಿತಗೊಳ್ಳುವ ಭೀತಿ ವ್ಯಕ್ತವಾಗಿದೆ.

ಭಾರಿ ಮಳೆಗೆ ಕೊಯನಾಡಿನ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಬಳಿ ರಸ್ತೆ ಕುಸಿತವಾಗುವ ಸಾಧ್ಯತೆ ದಟ್ಟವಾಗಿದೆ. ಈ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ರಸ್ತೆ ಸಂಚಾರವನ್ನು ನಿರ್ಬಂದಿಸಲಾಗಿದೆ. ಎಲ್ಲ ವಾಹನ ಸವಾರರು ಭಾರಿ ಆತಂಕದಿಂದಲೇ ಪ್ರಯಾಣಿಸುತ್ತಿದ್ದಾರೆ. ಒಂದು ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಏನು ಮಾಡೋದು ಎಂದು ಸ್ಥಳೀಯರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.   

Related posts

ಬರೋಬ್ಬರಿ  2 ಕೆಜಿ ತೂಕದ ಕಬ್ಬಿಣದ ಗೂಡು ಕಟ್ಟಿದ ಸುಳ್ಯದ ಕಾಗೆ

ಬುಡ ಸಹಿತ ಧರೆಗುರುಳಿ ಬಿದ್ದ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರದ ತಾಕೊಡೆ ಮರ..!, 1,000 ವರ್ಷಗಳ ಇತಿಹಾಸವಿರುವ ಮರ ಇನ್ನು ನೆನಪು ಮಾತ್ರ

ಬೆಳ್ತಂಗಡಿ:1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವು..! ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು