Uncategorized

ರಾಷ್ಟ್ರ ಧ್ವಜದ ಮಹತ್ವ: ಮಾಜಿ ಸಿಎಂ ಎಡವಟ್ಟು..!

ನ್ಯೂಸ್ ನಾಟೌಟ್: ರಾಷ್ಟ್ರ ಧ್ವಜದ ಮಹತ್ವದ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಮಾತನಾಡಲು ಹೋಗಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.

ಮೈಸೂರಿನಲ್ಲಿ ಇತ್ತೀಚೆಗೆ ಮಾತನಾಡಿದ್ದ ಸಿದ್ಧರಾಮಯ್ಯ, ‘ತ್ರಿವರ್ಣ ಧ್ವಜ ಅಂದ್ರೆ ಏನು ಅಂತ ಗೊತ್ತಾ ನಿಮಗೆ..ಕೆಂಪು, ಬಿಳಿ, ಹಸಿರು ಹಾಗೂ ನಡುವಿನಲ್ಲಿ ಅಶೋಕ ಚಕ್ರ’ ಎಂದು ಹೇಳಿದ್ದಾರೆ. ಅವರ ಪಕ್ಕದಲ್ಲಿದ್ದ ಕಾಂಗ್ರೆಸ್ ನ ಇತರೆ ಮುಖಂಡರು ಸಿದ್ಧರಾಮಯ್ಯ ಹೀಗೆ ತಪ್ಪಾಗಿ ಹೇಳುತ್ತಿದ್ದರೂ ನೀವು ತಪ್ಪಾಗಿ ಹೇಳಿದ್ರಿ ಅಂತ ಹೇಳುವ ಧೈರ್ಯವನ್ನು ಯಾರೂ ಮಾಡಲಿಲ್ಲ. ಎಲ್ಲರು ಮುಖಮುಖ ನೋಡಿಕೊಂಡು ಸುಮ್ಮನಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತದ ಧ್ವಜದ ಬಣ್ಣ ಕೇಸರಿ, ಬಿಳಿ, ಹಸಿರು ಆದರೆ ಸಿದ್ಧರಾಮಯ್ಯ ಅವರ ಧ್ವಜದ ಬಣ್ಣ ಕೆಂಪು, ಬಿಳಿ, ಹಸಿರು ಎಂದು ಜಾಲತಾಣದಲ್ಲಿ ವ್ಯಂಗ್ಯವಾಡುತ್ತಿದ್ದಾರೆ.

Related posts

ಥಾಮಸ್ ಕಪ್ ಭಾರತದ ಸಾಧನೆ ಅಣಕವಾಡಿದ ಐಎಎಸ್ ಅಧಿಕಾರಿ..!

ನಾನು ರಾಮ ಭಕ್ತ,ರಾಮನೇ ನಮ್ಮ ಮನೆ ದೇವರು..!ರಾಮನ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಮುಸ್ಲಿಂ ಶಾಸಕ ..!

ಸಮಾಜ ಹಾಳು ಮಾಡುತ್ತಿರುವ RSS ಮೇಲೂ ಕ್ರಮ ತೆಗೊಳ್ಳಿ: ಸಿದ್ದರಾಮಯ್ಯ