ಕ್ರೈಂ

6 ವರ್ಷದ ಬಾಲಕನನ್ನೇ ಹತ್ಯೆಗೈದ 8ನೇ ಕ್ಲಾಸ್ ವಿದ್ಯಾರ್ಥಿ..!ಶಾಲೆಗೆ ರಜೆ ಸಿಗುತ್ತೆ ಕಾರಣಕ್ಕೆ ಬಾಲಕನ ಪ್ರಾಣವೇ ಹೋಯ್ತು..!ಏನಿದು ಬೆಚ್ಚಿಬೀಳಿಸುವ ವರದಿ?

204

ನ್ಯೂಸ್‌ ನಾಟೌಟ್‌ : ಶಾಲೆಗೆ ರಜೆ ಸಿಗಬೇಕೆಂಬ ಉದ್ದೇಶದಿಂದ ಒಂದನೇ ತರಗತಿ ವಿದ್ಯಾರ್ಥಿಯನ್ನು 8ನೇ ತರಗತಿ ವಿದ್ಯಾರ್ಥಿಯೋರ್ವ ಹತ್ಯೆಗೈದ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಶಾಲೆಯೊಂದರಲ್ಲಿ ವರದಿಯಾಗಿದೆ. ನಾಪತ್ತೆಯಾಗಿದ್ದ ಒಂದನೇ ತರಗತಿ ವಿದ್ಯಾರ್ಥಿ ಎರಡು ದಿನಗಳ ನಂತರ ಶಾಲೆಯ ಬಳಿಯ ಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ.

ಇದನ್ನು ಗಂಭೀರವಾಗಿ ತೆಗೆದು ಕೊಂಡ ಪೊಲೀಸರು ತನಿಖೆಯ ವೇಳೆ ಆತನ ಶಾಲೆಯ ಹಿರಿಯ ವಿದ್ಯಾರ್ಥಿಯೇ ಬಾಲಕನ ಕೊಲೆ ಮಾಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎಂದು NDTV ವರದಿ ಮಾಡಿದೆ.ಜನವರಿ 30ರಂದು ಖಾಸಗಿ ಶಾಲೆಯೊಂದರಲ್ಲಿ ಊಟದ ವಿರಾಮದ ವೇಳೆ ಒಂದನೇ ತರಗತಿ ವಿದ್ಯಾರ್ಥಿ ನಾಪತ್ತೆಯಾಗಿದ್ದ ಎನ್ನಲಾಗಿದೆ. ಭಾರೀ ಹುಡುಕಾಟದ ಬಳಿಕ ಎರಡು ದಿನಗಳ ನಂತರ ಹುಡುಗನ ಮೃತ ದೇಹ ಪತ್ತೆಯಾಗಿದೆ.

ಶಾಲೆಯಿಂದ 400 ಮೀಟರ್ ದೂರದಲ್ಲಿರುವ ಕೊಳದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನ ತಲೆಗೆ ಪೆಟ್ಟು ಬಿದ್ದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.ಪೊಲೀಸರು ಸಾವಿನ ತನಿಖೆಯನ್ನು ಪ್ರಾರಂಭಿಸಿದಾಗ, ಸುಳಿವುಗಳು ಅದೇ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯ ಪಾತ್ರವನ್ನು ತೋರಿಸಿದವು ಎಂದು ತಿಳಿದು ಬಂದಿದೆ.

ಎಂಟನೇ ತರಗತಿ ವಿದ್ಯಾರ್ಥಿ ಶಾಲೆಗೆ ಗೈರು ಹಾಜರಾಗಿದ್ದರಿಂದ ಆತನ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.ಬಳಿಕ ಆತನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಬಾಲಕನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಗೆ ಕಾರಣ ಕೇಳಿದ ಪೊಲೀಸರು ‘ರಜೆ ಬೇಕು ಎಂಬ ಕಾರಣಕ್ಕೆ ಬಾಲಕ ಒಂದನೇ ತರಗತಿ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದೇನೆ. ಶಾಲೆಯಲ್ಲಿನ ಸಾವಿನಿಂದ ಒಂದು ರಜೆ ಸಿಗಬಹುದು ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

See also  ನದಿಯಲ್ಲಿ ಸ್ಫೋಟಕ ಬಳಸಿ ಮೀನುಗಾರಿಕೆ..! ಸಿಡಿಮದ್ದಿನ ಸ್ಫೋಟಕ್ಕೆ ಜಲಚರಗಳ ಮಾರಣ ಹೋಮ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget