ದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು..! ಜಾನಿ ಮಾಸ್ಟರ್ ಜೊತೆ ಕೆಲಸ ಮಾಡುತ್ತಿದ್ದ ನೃತ್ಯಗಾರ್ತಿಯಿಂದಲೇ ದೂರು..!

239

ನ್ಯೂಸ್ ನಾಟೌಟ್: ಇತ್ತೀಚೆಗಷ್ಟೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ (johnny master) ವಿರುದ್ಧ ತಮ್ಮ ಸಹೋದ್ಯೋಗಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹೈದರಾಬಾದ್ ನ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

21 ವರ್ಷದ ನೃತ್ಯಗಾರ್ತಿ ನೀಡಿದ ದೂರಿನ ಮೇಲೆ ಮೊದಲಿಗೆ ರಾಯ್ ದುರ್ಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತಾದರೂ, ಠಾಣಾ ವ್ಯಾಪ್ತಿಯ ಹಿನ್ನೆಲೆಯಲ್ಲಿ ಸದ್ಯ ಪ್ರಕರಣವನ್ನು ನರಸಿಂಗಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ದೂರುದಾರೆ ನೃತ್ಯಗಾರ್ತಿಯು ಜಾನಿ ಮಾಸ್ಟರ್ ಅವರೊಂದಿಗೆ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು ಹಾಗೂ ದೇಶದ ವಿವಿಧ ಭಾಗಗಳಿಗೆ ಅವರೊಂದಿಗೆ ಚಿತ್ರೀಕರಣಕ್ಕೆ ತೆರಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ, ಸದರಿ ನೃತ್ಯಗಾರ್ತಿಯ ಮೇಲೆ ಅತ್ಯಾಚಾರವೆಸಗಿರುವ ಜಾನಿ ಮಾಸ್ಟರ್, ಈ ಕುರಿತು ಯಾರ ಬಳಿಯೂ ಹೇಳದಂತೆ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಲಾಗಿದೆ. ದೂರನ್ನು ಆಧರಿಸಿ, ಪ್ರಕರಣ ದಾಖಲಿಸಿಕೊಂಡಿರುವ ನರಸಿಂಗಿ ಠಾಣೆಯ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Click

https://newsnotout.com/2024/09/mangaluru-police-arrested-6-people-masjid-issue-kannada-news-sunday/
https://newsnotout.com/2024/09/audio-munirathna-issue-kannada-news-viral-audio-case/
https://newsnotout.com/2024/09/bc-road-bike-rally-police-and-hindu-leaders-oppose-kananda-news/
https://newsnotout.com/2024/09/mangaluru-masjid-issue-vhp-protest-in-bc-road-kannada-news/
https://newsnotout.com/2024/09/darshan-thugudeepa-in-ballary-and-secrete-latter-to-him-from-lawyer/
https://newsnotout.com/2024/09/palestain-flag-in-chikkamagaluru-minor-boys-are-under-police-custody-kannada-news/
https://newsnotout.com/2024/09/talakavery-thirtha-udbhava-kananda-news-muhurtha-kannada-news/
https://newsnotout.com/2024/09/reels-crazy-kannada-news-viral-video-police-arrest-the-man-who-create-sence-in-public/
See also  ರಶ್ಮಿಕಾ ಮಂದಣ್ಣಗೆ ಟೀಕೆ ಮಾಡಿದ್ದ ಶಾಸಕನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು..! ಪ್ರಚಾರಕೋಸ್ಕರ ಪತ್ರ ಬರೆದಿರಬಹುದು ಎಂದ ಶಾಸಕ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget