ನ್ಯೂಸ್ ನಾಟೌಟ್ : ವಿದ್ಯಾರ್ಥಿನಿ ಪೆಲಿಸಾ ಕಾನ್ವೆಂಟ್‌ನಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದಾಗ ದಿಢೀರನೇ ಕುಸಿದುಬಿದ್ದಿದ್ದಾಳೆ. ಬಳಿಕ, ಆಸ್ಪತ್ರೆಗೆ ರವಾನಿಸಿತರಾದರೂ ಅಷ್ಟರಲ್ಲಾಗಲೇ ಅಸುನೀಗಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಕಾನ್ವೆಂಟ್‌ನಲ್ಲಿ ನಡೆದಿದೆ.
ರಾಷ್ಟ್ರಗೀತೆ ಹಾಡುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಅಸುನೀಗಿದ್ದಾರೆ. ಪಟ್ಟಣದ ನಿರ್ಮಲಾ ಕಾನ್ವೆಂಟ್‌ನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಪೆಲಿಸಾ ಮೃತ ದುರ್ದೈವಿ. ಇಂದು (ಆಗಸ್ಟ್ 09) ವಿದ್ಯಾರ್ಥಿನಿ ಪೆಲಿಸಾ ಕಾನ್ವೆಂಟ್‌ನಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದಾಗ ದಿಢೀರನೇ ಕುಸಿದುಬಿದ್ದಿದ್ದಾಳೆ. ಬಳಿಕ, ಆಸ್ಪತ್ರೆಗೆ ರವಾನಿಸಿತರಾದರೂ ಅಷ್ಟರಲ್ಲಾಗಲೇ ಅಸುನೀಗಿದ್ದಾಳೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮೃತಳ ತಾಯಿ ದೂರು ಕೊಟ್ಟು ಪ್ರಕರಣ ದಾಖಲಾಗಿದೆ. ಪೆಲಿಸಾ ಮೂಲತಃ ಬೆಂಗಳೂರಿನವಳಾಗಿದ್ದು, ಇನ್ನು ಈ ಮೊದಲು ತಂದೆ ಅಸುನೀಗಿದ್ದರಿಂದ ಈಕೆಯನ್ನು ಕ್ರೈಸ್ತ ಮಿಷನರಿ ಸಹಾಯದಿಂದ ವಿದ್ಯಾಭ್ಯಾಸಕ್ಕಾಗಿ ಗುಂಡ್ಲುಪೇಟೆ ನಿರ್ಮಲಾ ಕಾನ್ವೆಂಟ್‌ಗೆ ದಾಖಲಿಸಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಾಲಕಿಗೆ ತಾಯಿ, ಓರ್ವ ಸಹೋದರ, ಓರ್ವ ಸಹೋದರಿ ಇದ್ದಾರೆ ಎನ್ನಲಾಗಿದೆ.