ನ್ಯೂಸ್ ನಾಟೌಟ್: ಮನುಷ್ಯರಂತೆ ಪ್ರಾಣಿಗಳಿಗೆ ಈ ಬೇಸಿಗೆ ಬಿಸಿಗೆ ಬಾಯಾರಿಕೆಯಾಗುವುದು ಸಹಜ. ಕೆಲವೊಮ್ಮೆ ಕಾಡಿನಲ್ಲಿರುವ ಕೊಳ, ಹಳ್ಳಗಳಲ್ಲಿನ ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಬ್ಬಂದಿಯೊಬ್ಬರು ಚೀತಾ ಹಾಗೂ ಅದರ ಮರಿಗಳಿಗೆ ಅದರ ಮರಿಗಳಿಗೆ ಕುಡಿಯಲು ನೀರು ಇಟ್ಟು ಬಾಯಾರಿಕೆ ನೀಗಿಸುವ ಪ್ರಯತ್ನ ಮಾಡಿದ್ದಾರೆ.
ಈ ಸಿಬ್ಬಂದಿಯನ್ನು ಅರಣ್ಯ ಇಲಾಖೆಯ ಚಾಲಕ ಸತ್ಯನಾರಾಯಣ್ ಗುರ್ಜರ್ ಎಂದು ಗುರುತಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಬ್ಬಂದಿಯ ಅಶಿಸ್ತಿನ ವರ್ತನೆ ಎಂದು ಗುರುತಿಸಿ ಅಧಿಕಾರಿಗಳು ಆತನನ್ನು ಚಾಲಕನ ಹುದ್ದೆಯಿಂದ ತೆಗೆದುಹಾಕಿದ್ದಾರೆ ವರದಿ ತಿಳಿಸಿದೆ.
ಇತ್ತೀಚೆಗಷ್ಟೇ ಚೀತಾ ಜ್ವಾಲಾ ಹಾಗೂ ಅದರ ನಾಲ್ಕು ಮರಿಗಳನ್ನು ಸ್ವತಃ ಗ್ರಾಮಸ್ಥರೇ ಕಲ್ಲುಗಳಿಂದ ಹೊಡೆದಿದ್ದರು. ಈ ಘಟನೆ ನಡೆದ ಎರಡು ವಾರಗಳ ಬಳಿಕವೇ ಸಿಬ್ಬಂದಿಯೊಬ್ಬರು ಚೀತಾಗಳಿಗೆ ಕುಡಿಯಲು ನೀರು ನೀಡುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
Offering water or milk to #cheetahs by villagers is not a good sign for #wildlife conservation. This may lead to dangerous consequences. As usual, the forest is undisturbed.@CMMadhyaPradesh @ntca_india @PMOIndia @KunoNationalPrk @Collectorsheop1 pic.twitter.com/3iIIYbd8Kn
— ajay dubey (@Ajaydubey9) April 5, 2025
ಈ ವಿಡಿಯೋಗೆ ಸಂಬಂಧ ಪಟ್ಟಂತೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಉತ್ತಮ್ ಕುಮಾರ್ ಶರ್ಮಾ ಭಾನುವಾರ ಪ್ರತಿಕ್ರಿಯೆ ನೀಡಿದ್ದು, ಸಿಬ್ಬಂದಿ ಕೆಲವು ಸೂಚನೆಗಳನ್ನು ಉಲ್ಲಂಘಿಸಿದ್ದು ಅಶಿಸ್ತು ತೋರಿದ್ದಾರೆ. ಈ ವಿಡಿಯೋವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಈ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.