ಕ್ರೀಡೆ/ಸಿನಿಮಾಕ್ರೈಂ

ಮತ್ತೆ ಚರ್ಚೆಯಲ್ಲಿ ನಟಿ ಪವಿತ್ರಾ ಲೋಕೇಶ್-ನರೇಶ್‌ ಜೋಡಿ, ಅಷ್ಟಕ್ಕೂ ಮೂರನೇ ಪತ್ನಿ ಕೊಟ್ಟ ಕಿರಿಕ್ ಏನು?

ನ್ಯೂಸ್‌ ನಾಟೌಟ್‌: ನಟ ನರೇಶ್ ತನ್ನ ಪತ್ನಿಯನ್ನು ಎದುರುಹಾಕಿಕೊಂಡು ಪವಿತ್ರಾ ಲೋಕೇಶ್ ಜೊತೆ ಲವ್ವಿ-ಡವ್ವಿಯಲ್ಲಿ ಬ್ಯುಸಿಯಾಗಿದ್ದಾಗಲೇ ಅವರಿಬ್ಬರು ನಟಿಸಿದ ಚಿತ್ರ ತೆರೆ ಕಂಡು ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಒಟಿಟಿ ಮತ್ತು ಮನರಂಜನಾ ವಾಹಿನಿಗಳಲ್ಲಿ ತೆಲುಗಿನ ಮಳ್ಳಿ ಪೆಳ್ಳಿ ಸಿನಿಮಾ ಬಿಡುಗಡೆ ಮಾಡದಂತೆ ತೆಲುಗು ನಟ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಮಳ್ಳಿ ಪೆಳ್ಳಿ ಚಿತ್ರದ ಕಥೆ ಸಂಪೂರ್ಣವಾಗಿ ಕಾಲ್ಪನಿಕ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದ್ದು, ರಮ್ಯಾ ರಘುಪತಿ ನೀಡಿದ ಕಾರಣಗಳು ಬಲವಾಗಿಲ್ಲದ ಕಾರಣ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದಿದೆ.
ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ನಂತರ ಸಿನಿಮಾ ಬಿಡುಗಡೆಯನ್ನು ತಡೆಯುವ ಹಕ್ಕು ಖಾಸಗಿ ವ್ಯಕ್ತಿಗಳಿಗೆ ಇಲ್ಲ ಎಂದೂ ಕೋರ್ಟ್ ತೀರ್ಪು ನೀಡಿದೆ. ಮಳ್ಳಿ ಪೆಳ್ಳಿ ಚಿತ್ರದಲ್ಲಿನ ಪಾತ್ರಗಳು ತಮ್ಮ ವ್ಯಕ್ತಿತ್ವಕ್ಕೆ ಚ್ಯುತಿ ತರುವಂತಿವೆ ಎಂದು ಆರೋಪಿಸಿ ರಮ್ಯಾ ರಘುಪತಿ, ಹೈದರಾಬಾದ್ ಮತ್ತು ಬೆಂಗಳೂರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದಿಂದ ತೀರ್ಪು ಹೊರಬಿದ್ದಿದೆ. ಮಳ್ಳಿ ಪೆಳ್ಳಿ ಚಿತ್ರವನ್ನು ಒಟಿಟಿ ಮತ್ತು ಟಿವಿ ವಾಹಿನಿಗಳಲ್ಲೂ ಯಾವುದೇ ಅಡೆತಡೆಯಿಲ್ಲದೆ ಪ್ರಸಾರ ಮಾಡಬಹುದು ಎಂದು ಕೋರ್ಟ್‌ ಹೇಳಿದೆ.

ಸುದೀರ್ಘ ಒಂದು ತಿಂಗಳ ಕಾಲಕ್ಕೂ ಅಧಿಕ ನಡೆದ ಪ್ರಹಸನವನ್ನೇ ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದರು ನರೇಶ್.‌ ತಮ್ಮ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿ, ತೆಲುಗಿನಲ್ಲಿ ಮಳ್ಳಿ ಪೆಳ್ಳಿ, ಕನ್ನಡದಲ್ಲಿ ಮತ್ತೆ ಮದುವೆ ಹೆಸರಿನಲ್ಲಿ ಮೇ 26ರಂದು ಬಿಡುಗಡೆ ಮಾಡಿದ್ದರು. ದೊಡ್ಡ ಮಟ್ಟದ ಹೈಪ್‌ ಗಿಟ್ಟಿಸಿಕೊಂಡಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸೋಲನುಭವಿಸಿತ್ತು.

ಅದಾದ ಬಳಿಕ ಸೌತ್‌ನ ಇನ್ನುಳಿದ ಮೂರು ಭಾಷೆಗಳಿಗೆ ಡಬ್‌ ಆಗಿ ಒಟಿಟಿಯಲ್ಲಿ ಪ್ರಸಾರ ಕಂಡಿತ್ತು. ಈ ಪ್ರಸಾರ ತಡೆ ಕೋರಿ ರಮ್ಯಾ ದೂರು ನೀಡಿದ್ದರು.
ಎಂ.ಎಸ್.ರಾಜು ನಿರ್ದೇಶನದ ಮಳ್ಳಿ ಪೆಳ್ಳಿ ಚಿತ್ರದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಮುಖ್ಯ ಭೂಮಿಕೆಯಲ್ಲಿದ್ದರು. ನರೇಶ್ ಅವರ ಜೀವನದಲ್ಲಿ ನಡೆದ ಇತ್ತೀಚಿನ ಕೆಲ ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ನಿರ್ಮಾಣಮಾಡಲಾಗಿತ್ತು.

Related posts

ಬಾಲಕಿಗೆ ದೆವ್ವ ಹಿಡಿದಿದೆ ಎಂದು ಲೈಂಗಿಕ ಕಿರುಕುಳ ನೀಡಿದ ಮೌಲ್ವಿ..! ಬಾಲಕಿಯ ಅಣ್ಣ ಮತ್ತು ವೌಲ್ವಿಯ ಬಂಧನ..!

ಕದ್ರಿ ದೇವಸ್ಥಾನಕ್ಕೆ ನುಗ್ಗಿದ ಅನ್ಯಕೋಮಿನ ಯುವಕರ ತಂಡ, ಉಗ್ರರ ಶಂಕೆ, ತೀವ್ರ  ತನಿಖೆ

ಪೆರಾಜೆ: ಒಂದೇ ದಿನ ಎರಡು ಬಾರಿ ಮಸೀದಿ ಬಳಿ ಅಗ್ನಿ ಅವಘಡ! ಸ್ಥಳೀಯ ಮನೆಗಳ ಸಮೀಪ ಹರಡಿದ ಬೆಂಕಿ!