ಜೀವನ ಶೈಲಿ/ಆರೋಗ್ಯರಾಜಕೀಯವಿಡಿಯೋವೈರಲ್ ನ್ಯೂಸ್

ಕಾರ್ಯಕರ್ತ ಅಸ್ವಸ್ಥಗೊಳ್ಳುತ್ತಿದ್ದಂತೆ ಭಾಷಣ ನಿಲ್ಲಿಸಿ ನೆರವಿಗೆ ಸೂಚಿಸಿದ ಮೋದಿ..! ಇಲ್ಲಿದೆ ವಿಡಿಯೋ

412

ನ್ಯೂಸ್ ನಾಟೌಟ್: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 48 ಸ್ಥಾನ ಗೆದ್ದುಕೊಂಡು ಅಧಿಕಾರಕ್ಕೇರಿದೆ. ಬರೋಬ್ಬರಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿದೆ. ಕಾರ್ಯಕರ್ತನ್ನುದ್ದೇಶಿ ಪ್ರಧಾನಿ ಮೋದಿ ಮಾತನಾಡುತ್ತಿದ್ದ ವೇಳೆ ಕಾರ್ಯಕರ್ತನೊಬ್ಬ ಅಸ್ವಸ್ಥಗೊಂಡಿದ್ದ. ತಕ್ಷಣವೇ ಮೋದಿ ಭಾಷಣ ನಿಲ್ಲಿಸಿದ್ದಾರೆ. ಬಳಿಕ ಕಾರ್ಯಕರ್ತನಿಗೆ ವೈದ್ಯಕೀಯ ನೆರವು ಸೂಚಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ದೆಹಲಿ ಬಿಜೆಪಿ ಪ್ರಧಾನ ಕಚೇರಿ ಬಳಿಕ ಅಪಾರ ಕಾರ್ಯಕರ್ತರು, ನಾಯಕರು ಸೇರಿದ್ದರು. ಕಾರ್ಯಕರ್ತರನ್ನುದ್ದೇಶಿ ಮೋದಿ ಭಾಷಣ ಮಾಡಿದ್ದಾರೆ. ಇದೇ ವೇಳೆ ಮೋದಿ ಮೋದಿ ಜಯಘೋಷಗಳು ಮೊಳಗಿದೆ.ಇತ್ತ ಕಾರ್ಯಕರ್ತನೊಬ್ಬ ಅಸ್ವಸ್ಥಗೊಂಡು ಕುಸಿದಿದ್ದಾನೆ. ಕಾರ್ಯಕರ್ತ ಅಸ್ವಸ್ಥಗೊಳ್ಳುತ್ತಿರುವುದು ಗಮನಿಸಿದ ಪ್ರಧಾನಿ ಮೋದಿ ತಕ್ಷಣ ಭಾಷಣ ನಿಲ್ಲಿಸಿದ್ದಾರೆ.

ಕಿಕ್ಕಿರಿದು ಕಾರ್ಯಕರ್ತರು, ಜಯಘೋಷಗಳಿಂದ ಕಾರ್ಯಕರ್ತನಿಗೆ ಅಸ್ವಸ್ಥೆತೆ ಉಂಟಾಗಿದೆ. ವಿಶ್ರಾಂತಿಗೆ ಅನುವು ಮಾಡಿಕೊಡಿ ಎಂದು ಮೋದಿ ಸೂಚಿಸಿದ್ದಾರೆ. ಕಾರ್ಯಕರ್ತನಿಗೆ ನೀರು ಕೊಡಿ ಎಂದು ಮೋದಿ ಹೇಳಿದ್ದಾರೆ.
ನೀರು ಕುಡಿಯುತ್ತಿದ್ದಂತೆ ಕಾರ್ಯಕರ್ತ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಬಳಿಕ ಮೋದಿ ಭಾಷಣ ಮುಂದವರಿಸಿದ್ದಾರೆ. ಮೋದಿಯ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Click

ಕುಟುಂಬ ಸಮೇತರಾಗಿ ಮಹಾ ಕುಂಭಮೇಳಕ್ಕೆ ತೆರಳಿದ ಡಿಕೆಶಿ, ಮುಂಜಾನೆ ಪ್ರಯಾಗ್‌ ರಾಜ್‌ ಕಡೆ ಪ್ರಯಾಣ

ಪುತ್ತೂರಿನ ಯುವಕ ಆವಿಷ್ಕರಿಸಿದ ಡ್ರೋನ್‌ ಸೇನೆ ಆಯ್ಕೆ..! ಮೆಷಿನ್‌ ಗನ್‌ ಸಹಿತ ಆಗಸದಲ್ಲಿ ಹಾರಾಟ ಮಾಡುವ ಸಾಮರ್ಥ್ಯ..!

See also  ಮನನೊಂದು ಮೊಬೈಲ್ ಟವರ್ ಏರಿ ಕುಳಿತ ಯುವಕ! ಸತತ ಒಂದು ಗಂಟೆಗಳ ಹೈಡ್ರಾಮಕ್ಕೆ ಕಾರಣವೇನು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget