ಕ್ರೈಂವೈರಲ್ ನ್ಯೂಸ್

ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿದ್ದ ಕಾಲೇಜು ಯುವಕ! ಪೊಲೀಸರ ತನಿಖೆಯಲ್ಲಿ ಬಯಲಾಯ್ತು ರಹಸ್ಯ!

ನ್ಯೂಸ್ ನಾಟೌಟ್: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಧಾರ್ ಕಾರ್ಡ್‌ಗಳ ಮಾಹಿತಿಯನ್ನು ತಿರುಚಿದ ಆರೋಪದ ಮೇಲೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಗುಜರಾತ್ ಪೊಲೀಸರ ತಂಡವು ಬುಧವಾರ ಬಂಧಿಸಿದೆ.

ಆರೋಪಿಯು ಜಿಲ್ಲೆಯ ಗರೀಬಾ ಗಾಂವ್ ಗ್ರಾಮದವನಾಗಿದ್ದು, ಕಾಂತಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾದತ್‌ಪುರ ಪ್ರದೇಶದ ಕಾಲೇಜೊಂದರಲ್ಲಿ ಪದವಿ ಓದುತ್ತಿದ್ದಾನೆ. ವೆಬ್‌ ಸೈಟ್‌ನಲ್ಲಿ ಆಧಾರ್ ಕಾರ್ಡ್‌ಗಳನ್ನು ತಿರುಚುವ ಪ್ರಯತ್ನಗಳು ನಡೆದಿವೆ ಎಂಬ ಮಾಹಿತಿಯನ್ನು ಅನುಸರಿಸಿ ಭೇಟಿ ನೀಡಿದ ಪೊಲೀಸ್ ತಂಡಕ್ಕೆ ಸ್ಥಳೀಯ ಪೊಲೀಸರು ಸಹಾಯ ಮಾಡಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ. ಆರೋಪಿಗಳ ಐಪಿ ವಿಳಾಸವನ್ನು ಪತ್ತೆಹಚ್ಚಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಬಂಧಿತನನ್ನು ಮುಜಫರಪುರ ಜಿಲ್ಲೆಯ ಸಾದತ್‌ಪುರ ಪ್ರದೇಶದ ಅರ್ಪಣಾ ದುಬೆ ಅಲಿಯಾಸ್‌ ಮದನ್‌ ಕುಮಾರ್‌ ಎಂದು ಗುರುತಿಸಲಾಗಿದೆ.

ಆರೋಪಿ ಯುವಕನ ಸಹೋದರನ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ, ವಿಚಾರಣೆಯ ವೇಳೆ ಅರ್ಪಣ್‌ ಮೂಲತಃ ಪಾರು ಗರೀಬಾ ನಿವಾಸಿ ಎಂದು ತಿಳಿದುಬಂದಿದೆ. ಸಾದತ್‌ಪುರದ ಬಾಡಿಗೆ ಮನೆಯಲ್ಲಿದ್ದು, ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದಿದೆ. ಫೋರ್ಜರಿ ಮಾಡಿದ ನಂತರ ಆರೋಪಿ ಹಲವೆಡೆ ಅದೇ ಆಧಾರ್ ಕಾರ್ಡ್ ಬಳಸಿದ್ದರು ಇದರ ಜೊತೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಅಧಾರ್ ಕಾರ್ಡ್ನ ಮಾಹಿತಿಯನ್ನು ತಿರುಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಅಮ್ಮ ಬೈಕ್‌ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ 20ರ ಯುವಕ..! ಬಡತನದ ಮಧ್ಯೆಯೂ 50ಸಾವಿರ ಸಾಲ ಮಾಡಿ ಹಣ ಹೊಂದಿಸಿದ್ದ ತಾಯಿ ಈಗ ಅನಾಥೆ..!

ಸುಬ್ರಹ್ಮಣ್ಯ: ಗೋವು ಕದಿಯಲು ದುಬಾರಿ ಕಾರಿನಲ್ಲಿ ಬಂದ ಕಳ್ಳರು..!

ಮಡಿಕೇರಿ : ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ