ರಾಜಕೀಯವೈರಲ್ ನ್ಯೂಸ್

ಪ್ರಧಾನಿ ಮೋದಿಯನ್ನು ಟೀಕಿಸುವ ಕಾಂಗ್ರೆಸ್ ಪಕ್ಷದ ನಾಯಕ ಮೋದಿಯನ್ನು ಇದ್ದಕ್ಕಿದ್ದಂತೆ ಹೊಗಳಿದ್ಯಾಕೆ?

334

ನ್ಯೂಸ್ ನಾಟೌಟ್: ಕಾಂಗ್ರೆಸ್‌ನವರು ಮೋದಿಯನ್ನು ಸದಾ ಟೀಕಿಸುತ್ತಲೇ ಇರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕಾಂಗ್ರೆಸ್ ನಾಯಕ ಇದ್ದಕ್ಕಿದ್ದ ಹಾಗೆ ಮೋದಿಯನ್ನು ಹೊಗಳಿ ಈಗ ಬಾರಿ ಸುದ್ದಿಯಾಗಿದ್ದಾರೆ. ಅಮೆರಿಕಾಕ್ಕೆ ಪ್ರಧಾನಿ ನರೇಂದ್ರ ಮೋದಿ ಜೂನ್ 3 ನೇ ವಾರ ಪ್ರವಾಸ ಕೈಗೊಳ್ಳುತ್ತಿದ್ದು, ಜೂ. 22 ರಂದು ಅಲ್ಲಿನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯ ದೇಶದ ಪ್ರಧಾನಿ ಎಲ್ಲಡೆಯೂ ಗೌರವಕ್ಕೆ ಅರ್ಹರಾಗಿದ್ದಾರೆ. ಅದರ ಬಗ್ಗೆ ತಮಗೆ ‘ಹೆಮ್ಮೆ’ ಇದೆ ಎಂದು ಕಾಂಗ್ರೆಸದ ನಾಯಕ ಸ್ಯಾಪ್ ಪಿತ್ರೊಡಾ ಹೇಳಿದರು.
ಭಾರತದ ಪ್ರಧಾನಿಗೆ ಸಾಕಷ್ಟು ಸ್ವಾಗತ ಸಿಗುತ್ತಿದೆ. ಮತ್ತು ನಾನು ಅದರ ಬಗ್ಗೆ ಸಂತೋಷಪಡುತ್ತೇನೆ ಏಕೆಂದರೆ ಅವರು ನನ್ನ ಪ್ರಧಾನ ಮಂತ್ರಿಯೂ ಆಗಿದ್ದಾರೆ. ಆದರೆ ನಾವು ತಪ್ಪು ಮಾಡಬಾರದು. ಅವರು ಬಿಜೆಪಿಯವರು ಎಂಬ ಕಾರಣಕ್ಕಾಗಿ ಅಲ್ಲ. ಅವರು ಭಾರತದ ಪ್ರಧಾನಿಯಾಗಿರುವುದರಿಂದ ಅವರಿಗೆ ಈ ರೀತಿ ಸ್ವಾಗತ ಸಿಗುತ್ತಿದೆ’ ಎಂದು ಪಿತ್ರೋಡ ಹೊಗಳಿದ್ದಾರೆ.
1.5 ಶತಕೋಟಿ ಜನಸಂಖ್ಯೆಯ ರಾಷ್ಟ್ರದ ಪ್ರಧಾನಿ ಎಲ್ಲೆಡೆ ಗೌರವಕ್ಕೆ ಅರ್ಹರು. ಮತ್ತು ನಾನು ಅದರ ಬಗ್ಗೆ ಹೆಮ್ಮೆಪಡುತ್ತೇನೆ. ನಾನು ಇದರ ಬಗ್ಗೆ ನಕಾರಾತ್ಮಕವಾಗಿಲ್ಲ ಎಂದಿದ್ದಾರೆ. ಕಾಂಗ್ರೆಸ್ ನಾಯಕ ಪಿತ್ರೋಡಾ ಅವರು ಪ್ರಸ್ತುತ ರಾಹುಲ್ ಗಾಂಧಿ ಅವರ ಮೂರು ನಗರಗಳ ಆರು ದಿನಗಳ ಯುಎಸ್ ಪ್ರವಾಸದಲ್ಲಿ ಅವರೊಂದಿಗೆ ಇದ್ದಾರೆ. ಪಿತ್ರೋಡಾ ಪ್ರಕಾರ, ಈ ಪ್ರವಾಸವು ನೈಜ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ದೃಷ್ಟಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ’ ಎಂದಿದ್ದಾರೆ.

See also  3ನೇ ಮಹಡಿಯಲ್ಲಿ ಕಾರಿನಂತೆ ಕಾಣುವ ನೀರಿನ ಟ್ಯಾಂಕ್ ನಿರ್ಮಿಸಿದ ಮನೆ ಮಾಲಿಕ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget