ದೇಶ-ಪ್ರಪಂಚವೈರಲ್ ನ್ಯೂಸ್

ಪ್ರಧಾನಿ ಮೋದಿಯನ್ನು “ದಿ ಬಾಸ್” ಎಂದ ಆಸ್ಟ್ರೇಲಿಯಾ ಪ್ರಧಾನಿ..! ಆಸ್ಟ್ರೇಲಿಯಾ ಪ್ರಧಾನಿ ಅಮೇರಿಕಾದ ಗಾಯಕನನ್ನು ಮೋದಿಗೆ ಹೋಲಿಸಿದ್ದೇಕೆ?

ನ್ಯೂಸ್‌ನಾಟೌಟ್‌: ಪ್ರಧಾನಿ ನರೇಂದ್ರ ಮೋದಿಯವರು “ದ ಬಾಸ್‌’ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಬಣ್ಣಿಸಿರುವುದು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಇದು ಕೇವಲ ಪ್ರಧಾನಿಗೆ ಸಿಕ್ಕ ಗೌರವವಲ್ಲ, ಭಾರತಕ್ಕೆ ಸಿಕ್ಕ ಗೌರವ ಎಂದು ಹಲವರು ಹೆಮ್ಮೆ ಪಟ್ಟಿದ್ದಾರೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಜನಪ್ರಿಯ ಪಾಪ್‌ ಗಾಯಕ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌ ಅವರಷ್ಟೇ ಪ್ರಸಿದ್ಧರಾಗಿದ್ದಾರೆ ಎಂದು ಹೇಳಿರುವುದು ವಿಶೇಷವಾಗಿತ್ತು.

ಬ್ರೂಸ್‌ರನ್ನು ಅಭಿಮಾನಿಗಳು “ದ ಬಾಸ್‌’ ಎಂದು ಕರೆಯುತ್ತಿದ್ದರು. ಈಗ ನಾನು ಭಾರತದ ಪ್ರಧಾನಿಯವರನ್ನು ಆ ಹೆಸರಿನಿಂದ ಕರೆಯುತ್ತಿದ್ದೇನೆ ಎಂದರು. ಕಳೆದ ಬಾರಿ ಈ ವೇದಿಕೆಯಲ್ಲಿ ಗಾಯಕನನ್ನು ನೋಡಿದ್ದೆ ಮತ್ತು ಅವರಿಗೆ ಹೆಚ್ಚಿನ ಸ್ವಾಗತ ಸಿಕ್ಕಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಭೇಟಿಯ ಸಂದರ್ಭದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ ಎಂದು ಅವರು ತಿಳಿಸಿದರು. ಈ ವೇಳೆ ನೆರೆದಿದ್ದ ಜನರಿಂದ ಭಾರಿ ಚಪ್ಪಾಳೆಗಳು ದೊರೆತವು.

ಭಾರತ ಜಗತ್ತಿನ ಮೂರನೇ ಅತ್ಯಂತ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆಯಲಿದೆ. ಒಂದು ವರ್ಷದ ಹಿಂದೆ ನಾನು ಆಸ್ಟ್ರೇಲಿಯಾದ ಪ್ರಧಾನಿಯಾದ ಬಳಿಕ ಇಬ್ಬರ ನಡುವೆ ಇದು ಆರನೇ ಭೇಟಿಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎಷ್ಟು ಗಾಢ ಬಾಂಧವ್ಯ ಇದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಆಸ್ಟ್ರೇಲಿಯ ಪ್ರಧಾನಿ ಹೇಳಿದ್ದಾರೆ.

Related posts

ಇನ್ನು ಮುಂದೆ ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನದಲ್ಲಿಇರುಮುಡಿ’ ಸಾಗಿಸಲು ಅನುಮತಿ..! ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಹೇಳಿದ್ದೇನು..?

ಬಸ್‌ ನಿಲ್ದಾಣದಲ್ಲಿ ಕುಳಿತಿದ್ದ ಯುವಕನ ಮೇಲೆ ನುಗ್ಗಿದ ಬಸ್..! ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ..!

ಜೈಲು ಸೇರ್ತಾರಾ ಸೋನು ಶ್ರೀನಿವಾಸ್ ಗೌಡ..? ಕಸ್ಟಡಿ ಅವಧಿ ಮುಕ್ತಾಯ..! ಇಲ್ಲಿದೆ ತನಿಖೆಯ ಮಾಹಿತಿ