ನ್ಯೂಸ್ ನಾಟೌಟ್: ಕಾವೇರಿ ನದಿ ನೀರು ಹಂಚಿಕೆ ವಿಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬೆಂಗಳೂರು ಬಂದ್, ಕರ್ನಾಟಕ ಬಂದ್ ಮಾಡಿದರೂ ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಮತ್ತೊಂದು ಕಡೆ ಇದೇ ಕಾವೇರಿ ಹೋರಾಟಕ್ಕೆ ಕನ್ನಡದ ಸಿನಿಮಾ ಮಂದಿ ಬೆಂಬಲ ಸೂಚಿಸಿದ್ದಾರೆ.
ಬಹುತೇಕ ಚಿತ್ರೋದ್ಯಮ ಈ ಕಾರ್ಯಕ್ಕೆ ಕೈ ಜೋಡಿಸಿ ಕಾವೇರಿ ನಮ್ಮದು ಎಂದಿದೆ. ಈ ನಡುವೆಯೇ ನಟ ನೆನಪಿರಲಿ ಪ್ರೇಮ್ ಒಂದು ಹೆಜ್ಜೆ ಮುಂದೆ ಹೋಗಿ ರಕ್ತದಲ್ಲಿಯೇ ಕಾವೇರಿ ನಮ್ಮದು ಎಂದು ಪತ್ರ ಬರೆದಿದ್ದಾರೆ.
ಕಾವೇರಿ ಹೋರಾಟ ಭುಗಿಲೆದ್ದ ಬಳಿಕ ಬಹುತೇಕ ಕನ್ನಡದ ಸಿನಿಮಾ ನಟ, ನಟಿಯರು ಕಾವೇರಿಗಾಗಿ ಜೀವ ಕೊಡಲೂ ಸಿದ್ಧ, ಕಾವೇರಿ ನಮ್ಮದು ಎಂದು ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಇದೀಗ ನಟ ನೆನಪಿರಲಿ ಪ್ರೇಮ್, ತಮ್ಮ ರಕ್ತದಲ್ಲಿ ಕಾವೇರಿ ನಮ್ಮದು ಎಂದು ಬರೆದು, ನ್ಯಾಯ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ರವಾನಿಸಿದ್ದಾರೆ. ನಟನ ಈ ಅಭಿಮಾನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಜತೆಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.
ಗೆ, ನರೇಂದ್ರ ಮೋದಿಜೀ, ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ, ದಯಮಾಡಿ ಕಾವೇರಿಗೆ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿಕೊಡಿ. ಕಾವೇರಿ ನಮ್ಮದು. ನೆನಪಿರಲಿ, ಪ್ರೇಮ್ ಚಿತ್ರನಟ ಎಂದು ಬರೆದು, ತಮ್ಮ ಅಂಗೈಗೂ ರಕ್ತ ಹಚ್ಚಿಕೊಂಡು ಕೈ ಗುರುತು ಹಾಕಿ ಮೋದಿಗೆ ರವಾನಿಸಿದ್ದಾರೆ.
ನಟ ಪ್ರೇಮ್ ಹೀಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ರಕ್ತದಲ್ಲಿ ಬರೆದ ಪತ್ರವನ್ನು ಹಂಚಿಕೊಳ್ಳುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ನಟನ ಪೋಸ್ಟ್‌ಗೆ ನೆಗೆಟಿವ್ ಕಾಮೆಂಟ್‌ಗಳು ಹರಿದು ಬಂದಿವೆ. ಆ ಪೈಕಿ ಆಯ್ದ ಕೆಲವರು ಪ್ರತಿಕ್ರಿಯೆ ಇಲ್ಲಿವೆ ಎಂದು ಪತ್ರದಲ್ಲಿ ಬರೆಯಲಾಗಿದೆ.