Latestಕ್ರೈಂರಾಜಕೀಯರಾಜ್ಯ

ನರೇಗಾದಲ್ಲಿ ಹಣ ಪಡೆಯಲು ಸೀರೆಯುಟ್ಟು ಫೋಟೋ ಅಪ್ಲೋಡ್ ಮಾಡಿದ ಯುವಕ..! ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಆರೋಪ..!

659

ನ್ಯೂಸ್ ನಾಟೌಟ್:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)ಬಿಲ್ ಹಣ ಪಡೆಯಲು ಯುವಕನೊಬ್ಬ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿ ಅಕ್ರಮ ಎಸಗಿರುವ ಘಟನೆ ಬೆಳಗಾವಿಯ ಹುನಗುಂದ ಹಾಗೂ ಇಳಕಲ್ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.

ಯುವಕನೋರ್ವ MGNREGA ಬಿಲ್ ಪಡೆಯಲು ಸೀರೆ ಉಟ್ಟು ಫೋಟೋಗೆ ಫೋಸ್‌ ನೀಡಿ ವೆಬ್‌ ಸೈಟ್‌ ಗೆ ಅಪ್ಲೋಡ್ ಮಾಡಿಸಿದ್ದಾನೆ. ಇಳಕಲ್ ತಾಲ್ಲೂಕಿನ ಚಿಕನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ‌ ಸಿದ್ದನಕೊಳ್ಳ ಗ್ರಾಮದಲ್ಲಿ ಬ್ಲಾಕ್ ಪ್ಲಾಂಟೇಷನ್ ಕಾಮಗಾರಿಗೆ ಮಂಗಳಮ್ಮ ಆರಿ ಹೆಸರಲ್ಲಿ ಯುವಕ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾನೆ.
ಪಂಚಾಯತ್ ರಾಜ್ ಹಾಗೂ ಗ್ರಾಮ ಪಂಚಾಯತ್‌ಗಳಿಂದ ನಿಯಮ ಮೀರಿದ ಕಾಮಗಾರಿ ಮಾಡಲಾಗಿದ್ದು, ಬಿಲ್‌ ಪಾಸ್ ಮಾಡಿಕೊಳ್ಳಲು ಈ ರೀತಿಯ ವಿನೂತನ ರೀತಿಯಲ್ಲಿ ಭ್ರಷ್ಟಾಚಾರ ಮಾಡಿ ಯುವಕ ಈಗ ಸುದ್ದಿಯಾಗಿದ್ದಾನೆ.

ಅಧಿಕಾರಿಗಳು ಅಂಗನವಾಡಿ ಕಟ್ಟಡಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರನ್ನು ಬಳಕೆ‌ ಮಾಡಿದ್ದಾರೆ. ಹುನಗುಂದ ಪಂಚಾಯತ್ ರಾಜ್‌ ಇಲಾಖೆ ವತಿಯಿಂದ ನಡೆದಿರುವ ಅಕ್ರಮ ಇದಾಗಿದ್ದು, ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಗಂಭೀರ ಆರೋಪ ಬಂದಿದೆ.

ಜೊತೆಗೆ ಬೇರೆ ಕೂಲಿಕಾರ್ಮಿಕರ ಒಂದೇ ಫೋಟೋ ಎರಡೆರಡು ಗ್ರಾಮ ಪಂಚಾಯತ್‌ ಗಳಲ್ಲಿ ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಗಂಜಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿ ಅಂಗನವಾಡಿ ಕಟ್ಟಡ ಮತ್ತು ಬಿಂಜವಾಡಗಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕಟ್ಟಡಕ್ಕೆ ಕೂಲಿ ಕಾರ್ಮಿಕರ ಒಂದೇ ಫೋಟೋ ಅಪ್ಲೋಡ್ ಮಾಡಲಾಗಿದ್ದು, ಹೆಸರು ಮಾತ್ರ ಬೇರೆ ಬೇರೆ ಮಾಡಲಾಗಿದೆ. ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇಂದು(ಜೂ.20) ಕೂಡ ಹಲವು ಏರ್ ಇಂಡಿಯಾ ವಿಮಾನಗಳ ಸಂಚಾರ ರದ್ದು..! ವಿಮಾನಯಾನ ಸಂಸ್ಥೆಗೆ ಸಾಲು-ಸಾಲು ಸವಾಲು..!

₹500 ಲಂಚ ಸ್ವೀಕರಿಸಿದ್ದಕ್ಕೆ ನಿವೃತ್ತಿಯಾದ 10 ವರ್ಷದ ನಂತರ ಗ್ರಾಮಲೆಕ್ಕಾಧಿಕಾರಿ ಜೈಲು ಪಾಲು..! 5 ವರ್ಷದ ಹಿಂದೆಯೇ ಮೃತಪಟ್ಟಿರುವ ದೂರುದಾರ..!

See also  ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣದ ಆಡಿಯೋ ಲೀಕ್! ಸಂಘದ ಪ್ರಚಾರಕ ಎಂದು ಸುಳ್ಳು ಹೇಳಿದ್ದ ವಿಶ್ವನಾಥ್ ಜೀ ಕೊನೆಯುಸಿರೆಳೆದಿದ್ದಾರೆ ಎಂದು ನಂಬಿಸಿದರಾ ಹಿಂದೂ ಹೋರಾಟಗಾರ್ತಿ? ಇಲ್ಲಿದೆ ವೈರಲ್ ಆಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget