ಕ್ರೈಂದೇಶ-ಪ್ರಪಂಚರಾಜಕೀಯರಾಜ್ಯವೈರಲ್ ನ್ಯೂಸ್

ಮೋದಿ ಪ್ರಧಾನಿಯಾಗ್ಬೇಕೆಂದು ಕಾಳಿಗೆ ಬೆರಳನ್ನೇ ಅರ್ಪಿಸಿದ ಅಭಿಮಾನಿ..! ಈ ಘಟನೆ ನಡೆದದ್ದೆಲ್ಲಿ..?

ನ್ಯೂಸ್ ನಾಟೌಟ್: ಲೋಕಸಭಾ ಚುನಾವಣಿ ಸಮೀಪಿಸುತ್ತಿದ್ದಂತೆ ಹಲವು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಅಭಿಮಾನಿಯೊಬ್ಬ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಕಾಳಿ ಮಾತೆಗೆ ತನ್ನ ಬೆರಳನ್ನೇ ತುಂಡು ಮಾಡಿ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.

ಸೋನಾರವಾಡದ ಅರುಣ್ ವರ್ಣೇಕರ್ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ತನ್ನ ಎಡಗೈನ ಬೆರಳನ್ನೇ ಕಾಳಿ ಮಾತೆಗೆ ಅರ್ಪಿಸಿದ್ದಾರೆ ಎನ್ನಲಾಗಿದೆ. ಅರುಣ್ ಈಗಾಗಲೇ ಮೋದಿಗಾಗಿ ಗುಡಿಯನ್ನು ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಬೆರಳು ತುಂಡುಮಾಡಿಕೊಂಡು ರಕ್ತದಲ್ಲಿ “ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ”. “ಮೋದಿ ಬಾಬಾ ಪಿ.ಎಂ, 3 ಬಾರ್ 78ತಕ್ 378, 378+ ಮೇರಾ ಮೋದಿ ಬಾಬಾ ಸಬ್ಸೆ ಮಹಾನ್” ಎಂದು ಗೋಡೆ ಹಾಗೂ ಪೋಸ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಮೋದಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ರಕ್ತದಲ್ಲಿ ಕಾಳಿಗೆ ಹರಕೆ ಕಟ್ಟಿದ್ದರು ಎನ್ನಲಾಗಿದೆ. ಈ ಹಿಂದೆಯೂ ಬೆರಳು ಕೊಯ್ದುಕೊಂಡು ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಹರಕೆ ನೀಡಿದ್ದರು. ಇದು ಕೊನೆಯ ಬಾರಿ ಆದ್ದರಿಂದ ಮೋದಿ ಪ್ರಧಾನಿಯಾಗಬೇಕು ಎಂದು ಬೆರಳನ್ನೇ ತುಂಡರಿಸಿ ಅರುಣ್ ಕಾಳಿಗೆ ನೀಡಿದ್ದಾರೆ ಎನ್ನಲಾಗಿದೆ.

Related posts

ಗ್ಯಾರಂಟಿಗೆ ಹೆದರಿ ಬಿಪಿಎಲ್ ಕಾರ್ಡ್‌ಗಳನ್ನು ಮರಳಿಸುತ್ತಿರುವ ಸರಕಾರಿ ನೌಕರರು, ನಾಲ್ವರು ಪೊಲೀಸರು ಸೇರಿದಂತೆ 22 ಸರ್ಕಾರಿ ನೌಕರರಿಂದ ಕಾರ್ಡ್‌ ವಾಪಸ್..!

ದರ್ಶನ್ ಮತ್ತು ಮಾಧ್ಯಮಗಳ ನಡುವಿನ 2 ವರ್ಷದ ಸುದೀರ್ಘ ಮುನಿಸು ಕೊನೆಗೊಂಡದ್ದು ಹೇಗೆ? ಅಷ್ಟಕ್ಕೂ ದರ್ಶನ್ ಬರೆದ ಆ ಪತ್ರದಲ್ಲೇನಿದೆ? ಆ ಒಂದು ಮೀಟಿಂಗ್ ನೀಡಿದ ತಿರುವೇನು?

ಕೈ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ನಾಮಪತ್ರ ಸಲ್ಲಿಕೆ..! ಶಿವರಾಜ್ ಕುಮಾರ್ ಜೊತೆಗೆ ಸಿಗಂದೂರು ಚೌಡೇಶ್ವರಿಯ ದರ್ಶನ