ಕೊಡಗುಕ್ರೈಂ

ನಾಪೋಕ್ಲುವಿನ ಬಟ್ಟೆ ಮಳಿಗೆ ಮಾಲಕ ಆತ್ಮಹತ್ಯೆ

ನ್ಯೂಸ್‌ನಾಟೌಟ್‌: ನಾಪೋಕ್ಲುವಿನಲ್ಲಿ ಕಳೆದ 20 ವರ್ಷಗಳಿಂದ ಆರ್.ಎಚ್. ಬಟ್ಟೆ ಮಳಿಗೆ ನಡೆಸುತ್ತಿದ್ದ ಉದ್ಯಮಿ ಎಚ್.ಕೆ. ಸಂದೀಪ್ (40) ಎಂಬವರು ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಸಂದೀಪ್‌ ಸಕಲೇಶಪುರ ತಾಲೂಕಿನ ಹೆತೂರು ಹೋಬಳಿ ಹಡ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ನಾಪೋಕ್ಲುವಿನಲ್ಲಿ ಬಟ್ಟೆ ಅಂಗಡಿ ಮಾಡಿಕೊಂಡಿದ್ದರು. ಇತ್ತೀಚೆಗೆ ವ್ಯಾಪಾರದಲ್ಲಿ ನಷ್ಟ ಹೊಂದಿದ್ದ ಕಾರಣ ಅಂಗಡಿ ಮುಚ್ಚಿದ್ದರು. ಬಳಿಕ ಅವರು ಬದುಕು ಸಾಗಿಸಲು ಕಷ್ಟಪಡುತ್ತಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ನಾಪೋಕ್ಲು ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಸಂದೀಪ್, ಶುಕ್ರವಾರ ಬೆಳಗ್ಗೆ 7.30ಕ್ಕೆ ಸ್ನೇಹಿತ ಸಂದೇಶ್‌ಗೆ ಕರೆ ಮಾಡಿ 9 ಗಂಟೆಗೆ ಮನೆಗೆ ಬರುವಂತೆ ತಿಳಿಸಿದ್ದರು. ಆದರೆ ಬಂದು ನೋಡಿದಾಗ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದರು. ಸಂದೇಶ್ ನೀಡಿದ ಮಾಹಿತಿಯಂತೆ ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಗಣೇಶ ಮೆರವಣಿಗೆ ವೇಳೆ ಹಿಂಸಾಚಾರ ಪ್ರಕರಣ ಸಂಬಂಧ 46 ಮಂದಿ ಬಂಧನ..! ಪ್ರಕರಣದ ಬಗ್ಗೆ ಉಡಾಫೆಯಾಗಿ ಉತ್ತರಿಸಿದ ಗೃಹ ಸಚಿವರು..!

ತಮಿಳುನಾಡು: 17 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ ಲೈಂಗಿಕವಾಗಿ ಬಳಸಿಕೊಂಡ ಮಹಿಳೆ..! ಆಕೆಯನ್ನು ಹಿಡಿದ ಪೊಲೀಸರ ಕಾರ್ಯಚರಣೆ ಹೇಗಿತ್ತು..?

ಸುಳ್ಯ: ವಾರಿಸುದಾರರಿಲ್ಲದ ರಿಕ್ಷಾ ಪೊಲೀಸ್‌ ಠಾಣೆಗೆ?