ರಾಜ್ಯವೈರಲ್ ನ್ಯೂಸ್

ನಂದಿಬೆಟ್ಟದಲ್ಲಿ ಕಿಕ್ಕಿರಿದು ಸೇರಿದ ಪ್ರವಾಸಿಗರು..! ವಾಪಸ್ ಬರಲೂ ಆಗದೆ, ಹೋಗಲು ಆಗದೆ ಮುಂಜಾನೆಯಿಂದ ಪರದಾಡಿದ ಜನರು..!

ನ್ಯೂಸ್‌ ನಾಟೌಟ್‌: ವೀಕೆಂಡ್‌ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ (Nandhi Hills) ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿದ್ದು, ಪ್ರವಾಸಿಗರನ್ನು ನಿಭಾಯಿಸಲು ಹರಸಾಹಸ ಪಡುವಂತಾಗಿದೆ.

ನಂದಿಬೆಟ್ಟ ನೋಡಲು ಸಾವಿರಾರು ಮಂದಿ ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ಆಗಮಿಸಿದ್ದು, ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳು ಕಿಕ್ಕಿರಿದು ತುಂಬಿವೆ. ಮುಂಜಾನೆ 5 ಗಂಟೆಯಿಂದ ನಂದಿಬೆಟ್ಟದ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ನಂದಿಗಿರಿಧಾಮ ಪೊಲೀಸರು ವಾಹನ ಸಂಚಾರ ದಟ್ಟಣೆ ನಿಭಾಯಿಸಲು ಹೈರಾಣಾದರು. ರಸ್ತೆಯ ಎರಡು ಬದಿ ವಿರುದ್ಧ ದಿಕ್ಕಿನಲ್ಲೂ ವಾಹನಗಳು ನಿಂತಿದ್ದು ನಂದಿಬೆಟ್ಟದಿಂದ‌ ವಾಪಾಸ್ ಬರುವವರು ಕೆಳಗೆ ಬರಲು ಪರದಾಡಬೇಕಾಯಿತು. ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರು ಅತ್ತ ಮೇಲೂ ಹೋಗಲಾಗದೆ ಇತ್ತ ಕೆಳಗೆ ವಾಪಸ್ ಸಹ ಬರಲಾಗದೆ ಪರದಾಡಿದರು.

Click 👇

https://newsnotout.com/2024/07/donald-trump-under-attack-by-unkwon-kannada-news-modi-replay
https://newsnotout.com/2024/07/pooja-gandhi-acts-in-serial-kannada-news-divya-viral-news
https://newsnotout.com/2024/07/love-with-married-kannada-news-griculture-issue-kananda-news

Related posts

ಮಟನ್ ಪೀಸ್‌ ಹೆಚ್ಚಿಗೆ ಹಾಕುವಂತೆ ಗ್ರಾಹಕನ ಕಿರಿಕ್..! ಕೈಯಲ್ಲಿದ್ದ ಮಟನ್ ಕತ್ತರಿಸುವ ಕತ್ತಿಯಿಂದ ತಲೆಗೆ ಹೊಡೆದ 16ರ ಬಾಲಕ..!

ಪುಟ್ಟ ಮಕ್ಕಳಿಬ್ಬರನ್ನು ಕತ್ತು ಹಿಸುಕಿ ಕೊಂದು, ತಾಯಿಯೂ ನೇಣಿಗೆ ಶರಣು..! ಪತಿ ಮತ್ತು ಕುಟುಂಬಸ್ಥರು ಪರಾರಿ..!

ಕೊಡಗು: ಬಾವಿಗೆ ಬಿದ್ದು ಕಾಡಾನೆ ಸಾವು..! ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಆಧಿಕಾರಿಗಳು ಭೇಟಿ