ನ್ಯೂಸ್ ನಾಟೌಟ್: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರತೀಕ ಮಹಾಭಾರತದ ಶ್ರೀ ಕೃಷ್ಣ ಪರಮಾತ್ಮನ ಜನ್ಮಾಷ್ಟಮಿಯನ್ನು ಸುಳ್ಯದ ಮೊಂಟೆಸ್ಸರಿ ಶಾಲೆಯಲ್ಲಿ ಆ.16ರಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ಮುದ್ದು ಪುಟಾಣಿಗಳು ಕೃಷ್ಣ-ರಾಧೆ-ಯಶೋಧೆಯರಾಗಿ ಮಿಂಚಿದರು. ತಮ್ಮ ಮಕ್ಕಳ ವೇಷ ಭೂಷಣ ಅಂದ ಚಂದದ ಆಟಗಳನ್ನು ನೋಡಿ ಪೋಷಕರು ಖುಷಿಪಟ್ಟರು. ಇದೇ ವೇಳೆ ಪುಟಾಣಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಾಲಾ ಸಂಚಾಲಕಿ ಗೀತಾಂಜಲಿ ಟಿ. ಜಿ ಅವರ ಸಮ್ಮುಖದಲ್ಲಿ ತೀರ್ಪುಗಾರರಾಗಿ ಹಾಗೂ ನಿರ್ಣಾಯಕರಾಗಿ ಆಗಮಿಸಿದ್ದ ರಾಜೇಶ್ವರಿ. ಎಂ , ಮಧುರಾ .ಯಂ. ಆರ್, ವಿನುತಾ ಪಾತಿಕಲ್ಲು ಅವರು ಕಾರ್ಯಕ್ರಮಕ್ಕೆ ಶ್ರೀ ಕೃಷ್ಣನ ತೊಟ್ಟಿಲು ತೂಗುವ ಮೂಲಕ ಚಾಲನೆ ನೀಡಿದರು.
ರಾಜೇಶ್ವರಿ. ಎಂ , ಮಧುರಾ .ಯಂ. ಆರ್, ವಿನುತಾ ಪಾತಿಕಲ್ಲು ತೀರ್ಪುಗಾರರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕಿ ಶ್ರೀಮತಿ. ಗೀತಾಂಜಲಿ ಟಿ. ಜಿ ಅವರು ವಹಿಸಿದ್ದರು. ದೀಪವನ್ನು ಬೆಳಗಿಸಿ ಕೃಷ್ಣನ ತೊಟ್ಟಿಲು ತೂಗುವ ಮೂಲಕ ಅತಿಥಿ ಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಜೇತ ಚಿಣ್ಣರಿಗೆ ಬಹುಮಾನವನ್ನು ವಿತರಿಸಲಾಯಿತು.
ಎಲ್.ಕೆ.ಜಿ ಪುಟಾಣಿಗಳಾದ ಮಾನ್ಯ ಹಾಗೂ ಮಹನ್ಯ ಪ್ರಾರ್ಥಿಸಿದರು. ರೂಪಾ ಸ್ವಾಗತಿಸಿ ದರು. ನಿರ್ಮಲ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.