ಕ್ರೈಂಬೆಂಗಳೂರುವೈರಲ್ ನ್ಯೂಸ್

ಮೊಬೈಲ್ ಎತ್ತಿಕೊಳ್ಳಲು ನಮ್ಮ ಮೆಟ್ರೋ ಹಳಿಗೆ ಹಾರಿದ ಮಹಿಳೆ..! 750kV ವೋಲ್ಟ್ ವಿದ್ಯುತ್ ಹರಿಯುವ ಹಳಿಗೆ ಬಿದ್ದ ಮಹಿಳೆಗೇನಾಯ್ತು..?

271

ನ್ಯೂಸ್ ನಾಟೌಟ್: ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು 750kV ವೋಲ್ಟ್ ವಿದ್ಯುತ್ ಹರಿಯುವ ನಮ್ಮ ಮೆಟ್ರೋ (Namma Metro) ಟ್ಯಾಕ್​ಗೆ ಮಹಿಳೆಯೊಬ್ಬರು (Woman) ಜಿಗಿದ ಘಟನೆ ಬೆಂಗಳೂರಿನ (Bengaluru) ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ(ಜ.1) ನಡೆದಿದೆ.

ಸದ್ಯ ಮೆಟ್ರೋ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ಇನ್ನು ಮಹಿಳೆ ಟ್ಯಾಕ್​ಗೆ ಜಿಗಿದ ಪರಿಣಾಮ ಪರ್ಪಲ್ ಲೈನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಜ.01ರ ಸಂಜೆ 6.40ರ ಸುಮಾರಿಗೆ ಇಂದಿರಾನಗರ ಮೆಟ್ರೋ ಸ್ಟೇಷನ್​ನಲ್ಲಿ ಈ ಘಟನೆ‌‌ ನಡೆದಿದೆ. ಇಂದಿರಾನಗರ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ ಮಹಿಳೆಯೊಬ್ಬರು ಮೆಟ್ರೋ ರೈಲಿಗಾಗಿ ಕಾದು ನಿಂತಿದ್ದರು.

ಈ ವೇಳೆ ಆಕಸ್ಮಿಕವಾಗಿ ಅವರ ಮೊಬೈಲ್ ರೈಲು ಹಳಿಗಳ ಮೇಲೆ ಬಿದ್ದಿದೆ. ಆಗ ತಕ್ಷಣವೇ ಮೊಬೈಲ್ ಎತ್ತಿಕೊಳ್ಳಲು ಮಹಿಳೆ ಹಳಿಗಳ ಮೇಲೆ ಜಿಗಿದಿದ್ದಾರೆ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣವೇ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದು, ಕೂಡಲೇ ಆಕೆಯನ್ನು ಮೇಲೆಕೆ ಎಳೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಕಾರಣ ಪರ್ಪಲ್ ಲೈನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು. ಮಹಿಳೆ ಜಿಗಿಯುತ್ತಿದ್ದಂತೆ ಕೂಡಲೇ ಸಂಪೂರ್ಣ ವಿದ್ಯುತ್ ಬಂದ್ ಮಾಡಿದ BMRCL ಸಿಬ್ಬಂದಿಯ ಮುಂಜಾಗ್ರತೆಯಿಂದ ಭಾರಿ ಅನಾಹುತ ತಪ್ಪಿದೆ ಎನ್ನಲಾಗಿದೆ.

https://newsnotout.com/2024/01/nursery-and-school-leave-in-up/
See also  ಆಟವಾಡುತ್ತಾ ಕಾರಿನೊಳಗೆ ಹೋದ ಬಾಲಕಿಯರು ಉಸಿರುಗಟ್ಟಿ ಸಾವು..! ಮದುವೆಗೆ ಬಂದಿದ್ದ ವೇಳೆ ಘಟನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget