ಕ್ರೈಂದೇಶ-ವಿದೇಶವೈರಲ್ ನ್ಯೂಸ್

ನಮಾಜ್ ವೇಳೆ ಎಲ್ಲಾ ದೇವಸ್ಥಾನ-ಮಂದಿರಗಳ ಮೈಕ್ ಬಂದ್ ಆಗ್ಬೇಕು..! ಚರ್ಚೆಗೆ ಕಾರಣವಾದ ಬಾಂಗ್ಲಾ ಸರ್ಕಾರದ ಆದೇಶ..!

ನ್ಯೂಸ್ ನಾಟೌಟ್: ಅಜಾನ್ ಮತ್ತು ನಮಾಜ್ ವೇಳೆ ಎಲ್ಲಾ ಮಂದಿರ, ದೇವಾಲಯ ಹಾಗೂ ಪ್ರಾರ್ಥನಾಲಯಗಳ ಮೈಕ್ ಬಂದ್ ಮಾಡುವಂತೆ ಬಾಂಗ್ಲಾದೇಶದ (Bangladesh) ಸರ್ಕಾರ ಆದೇಶಿಸಿದೆ. ನಮಾಜ್ ಹಾಗೂ ಆಜಾನ್‍ ಗೂ 5 ನಿಮಿಷ ಮೊದಲೇ ಮಂದಿರಗಳ ಮೈಕ್ ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಬಾಂಗ್ಲಾದೇಶದ ಹಿಂದೂ ಸಮುದಾಯದ ಅತಿ ದೊಡ್ಡ ಧಾರ್ಮಿಕ ಹಬ್ಬವಾದ ದುರ್ಗಾ ಪೂಜೆಗೂ ಮುನ್ನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕುರಿತು ಉನ್ನತ ಮಟ್ಟದ ಸಭೆಯ ನಂತರ ಈ ಸೂಚನೆ ನೀಡಲಾಗಿದೆ. ಈ ಮಾರ್ಗಸೂಚಿಗಳನ್ನು ಅನುಸರಿಸಲು ಮಂದಿರಗಳ ಸಮಿತಿಗಳು ಒಪ್ಪಿಕೊಂಡಿವೆ ಎಂದು ಬಾಂಗ್ಲಾ ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎಂಡಿ ಜಹಾಂಗೀರ್ ಆಲಂ ಚೌಧರಿ ತಿಳಿಸಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ಅವ್ಯವಸ್ಥೆ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಬಾಂಗ್ಲಾದೇಶದಲ್ಲಿ ಹೊಸದಾಗಿ ರಚನೆಯಾಗಿರುವ ಮಧ್ಯಂತರ ಸರ್ಕಾರ ಹಿಂದೂ ಸಮುದಾಯಕ್ಕೆ (Hindu) ತಾತ್ಕಾಲಿಕವಾಗಿ ದುರ್ಗಾ ಪೂಜೆ, ಸಂಬಂಧಿತ ಚಟುವಟಿಕೆಗಳು, ವಿಶೇಷ ಸಂಗೀತ ಕಾರ್ಯಕ್ರಮವನ್ನು ನಮಾಜ್ ಹಾಗೂ ಆಜಾನ್ ವೇಳೆ ನಿಲ್ಲಿಸುವಂತೆ ಸೂಚಿಸಿದೆ. ದೇಶದಲ್ಲಿ ವಾರ್ಷಿಕ ದುರ್ಗಾ ಪೂಜೆ ಆಚರಣೆಗಳಿಗೆ ತಯಾರಿ ನಡೆಸುತ್ತಿರುವಾಗ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಈ ಸೂಚನೆ ನೀಡಲಾಗಿದೆ ಎಂದು ಬಾಂಗ್ಲಾ ಸರ್ಕಾರದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

Click

https://newsnotout.com/2024/09/amry-tranees-are-under-attack-by-unkown-kannada-news-police-investugation/
https://newsnotout.com/2024/09/first-night-man-ask-adhar-with-girl-jain-caste-kannada-news-viral/
https://newsnotout.com/2024/09/kannada-news-school-girl-arrest-police-rajashekar-arrested/
https://newsnotout.com/2024/09/wayanad-landslide-alive-family-facing-tragedy-kannada-news-marriage/
https://newsnotout.com/2024/09/ganesha-chathurti-conflict-kannada-news-46-are-arrested-kannada-news-d/
https://newsnotout.com/2024/09/kannada-news-ayyappa-temple-onam-celebration-kannada-news/

Related posts

ಬೆಳಿಗ್ಗೆ ಪೊಲೀಸ್, ರಾತ್ರಿಯಾಗ್ತಿದ್ದಂತೆ ಕಳ್ಳ..! ಏನಿದು ಮುಖ್ಯಪೇದೆಯ ಕಳ್ಳ-ಪೊಲೀಸ್ ಆಟ? ಈತನ ಬಂಧನವಾದದ್ದೇಗೆ?

ದಿ.ಸ್ಪಂದನಾ ವಿಜಯ್ ರಾಘವೇಂದ್ರ ಬರೆದಿದ್ದ ಡೈರಿ ಸಿಕ್ಕಿದ್ದು ಹೇಗೆ? ಇಷ್ಟು ದಿನಗಳ ಬಳಿಕ ಸಿಕ್ಕ ಡೈರಿಯಲ್ಲೇನಿತ್ತು ಗೊತ್ತಾ..?

ಗರ್ಭಗುಡಿ ಪ್ರವೇಶಿಸಿದ ಮಹಿಳೆಯನ್ನು ಎಳೆದು ಹೊರ ಹಾಕಿದ್ದೇಕೆ ಸಿಬ್ಬಂದಿ..! ರಾಜವಂಶಸ್ಥೆಯನ್ನು ಬಂಧಿಸಿದ್ದೇಕೆ ಪೊಲೀಸರು? ಅಷ್ಟಕ್ಕೂ ಮಧ್ಯರಾತ್ರಿ ನಡೆದದ್ದಾದರೂ ಏನು? ಇಲ್ಲಿದೆ ವೈರಲ್ ವಿಡಿಯೋ