ಕರಾವಳಿಕ್ರೈಂ

ನಾಲ್ಕೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು! ಎರಡು ದಿನಗಳಿಂದ ನಿಯಂತ್ರಣಕ್ಕೆ ಬಾರದ ಬೆಂಕಿ!

ನ್ಯೂಸ್ ನಾಟೌಟ್: ಕರಾವಳಿ ಭಾಗದಲ್ಲಿ ಸರಣಿ ಕಾಡುಕಿಚ್ಚು ಅವಘಡಗಳು ಸಂಭವಿಸುತ್ತಾಲೇ ಇವೆ. ಇದೀಗ ತುಂಬತ್ತಾಜೆ, ವಲ್ಪಾರೆ, ಚಾರ್ಮತ, ಹೊಡ್ಡೆತಮುಖ ಪ್ರದೇಶದಲ್ಲಿ ಮಾರ್ಚ್ ೨೮ ಮತ್ತು ೨೯ರಂದು ಬೆಂಕಿ ಹೊತ್ತಿ ಉರಿಯುತ್ತಿದೆ.

ನಾಲ್ಕೂರು ಮತ್ತು ಏನೆಕಲ್ಲು ಗ್ರಾಮಗಳನ್ನು ಹೊಂದಿಕೊಂಡಿರುವ ಅರಣ್ಯ ಪ್ರದೇಶ ತುಂಬತ್ತಾಜೆ, ವಲ್ಪಾರೆ, ಚಾರ್ಮತ ಅರಣ್ಯ ಪ್ರದೇಶದ ಹೊಡ್ಡೆತಮುಖ ಭಾಗದಲ್ಲಿ ಬೆಂಕಿ ಹೊತ್ತಿಕೊಂಡು ನಿನ್ನೆ ಮಧ್ಯಾಹ್ನದಿಂದ ಉರಿಯುತ್ತಿರುವುದಾಗಿ ವರದಿಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸೇರಿಕೊಂಡು ಬೆಂಕಿ ನಂದಿಸುವ ಕಾರ್ಯ ಮಾಡಿರುವುದಾಗಿ ವರದಿ ತಿಳಿಸಿದೆ.

ಸಂಜೆ ಆಗುವಷ್ಟರಲ್ಲಿ ಬೆಂಕಿಯನ್ನು ನಂದಿಸಲಾಗಿತ್ತು. ಆದರೆ ಇಂದು ಮತ್ತೆ ಬೆಂಕಿ ವ್ಯಾಪಕವಾಗಿ ಹೊತ್ತಿ ಉರಿದು ಆವರಿಕೊಂಡಿದೆ ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆ, ಶೌರ್ಯ ವಿಪತ್ತು ಘಟಕ ಹಾಗೂ ನೂರಾರು ಸಂಖ್ಯೆ ಊರವರು ಬಂದು ಬೆಂಕಿ ನಂದಿಸವ ಕಾರ್ಯದಲ್ಲಿತೊಡಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ಚೆಂಬು:ಆನೆ ದಾಳಿ ಕೃಷಿ ನಷ್ಟ ಪ್ರದೇಶಕ್ಕೆ ಕೆಪಿಸಿಸಿ ರಾಜ್ಯ ವಕ್ತಾರ ಭೇಟಿ,ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನಿರ್ದೇಶನದ ಮೇರೆಗೆ ಆಗಮನ

ನಾಲ್ವರು ನಕ್ಸಲರ ಎನ್‌ಕೌಂಟರ್..! ಭದ್ರತಾ ಪಡೆಗಳ ಕ್ಷಿಪ್ರ ಕಾರ್ಯಾಚರಣೆ

ನಾನು ಅವಳಲ್ಲ… ಅವನು..!, ಲಿಂಗ ಪರಿವರ್ತನೆಗೆ ಮುಂದಾದ ಮಾಜಿ ಮುಖ್ಯಮಂತ್ರಿ ಪುತ್ರಿ!