ಕ್ರೈಂಬೆಂಗಳೂರುರಾಜಕೀಯ

ಮೋದಿಗೆ ‘ಚೊಂಬು’ ತೋರಿಸಲು ಬಂದ ನಲಪಾಡ್ ಗೆ ಕಂಬಿ ತೋರಿಸಿದ ಪೊಲೀಸರು..! ಅರ್ಧಗಂಟೆ ಮುಂಚೆಯೇ ನಂಬರ್‌ ಇಲ್ಲದ ಕಾರಿನಲ್ಲಿ ಕಾದು ಕುಳಿತಿದ್ದ ನಲಪಾಡ್

248

ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ (PM Modi)ಗೆ ಚೊಂಬು ತೋರಿಸಲು ಯತ್ನಿಸಿದ ಯುವ ಕಾಂಗ್ರೆಸ್ ಮುಖಂಡ ಮೊಹಮದ್‌ ನಲಪಾಡ್ (Mohammed Nalapa)ರನ್ನು ಪೊಲೀಸರು (Bengaluru Police) ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮೋದಿ ಪಾಲ್ಗೊಂಡಿದ್ದರು. ಸಮಾವೇಶದ ಬಳಿಕ ಮೋದಿ ಹಿಂದಿರುಗುತ್ತಿದ್ದರು, ಈ ವೇಳೆ ಮೇಖ್ರಿ ಸರ್ಕಲ್ ಬಳಿ ಚೊಂಬು ಪ್ರದರ್ಶನಕ್ಕೆ ಕಾಂಗ್ರೆಸ್ ಮುಖಂಡರು ಯತ್ನಿಸಿದ್ದರು.

ಯುವ ಕಾಂಗ್ರೆಸ್ ಮುಖಂಡ ನಲಪಾಡ್ ನೇತೃತ್ವದಲ್ಲಿ ಮೋದಿಗೆ ಚೊಂಬು ತೋರಿಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ನಲಪಾಡ್ ಸೇರಿದಂತೆ ಇಬ್ಬರು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ನಲಪಾಡ್‌ ಚೊಂಬು ಪ್ರದರ್ಶನ ಮಾಡೋದು ತಪ್ಪಾ ಅಂತಾ ಆಕ್ರೋಶ ಹೊರಹಾಕಿದ್ರು. ಮೋದಿ ತೆರಳುವ ರಸ್ತೆ ಮಾರ್ಗದಲ್ಲಿ (ಮೇಖ್ರಿ ಸರ್ಕಲ್‌) ಅರ್ಧಗಂಟೆ ಮುಂಚೆಯೇ ಬಂದಿದ್ದ ನಲಪಾಡ್‌ ನಂಬರ್‌ ಇಲ್ಲದ ಕಾರಿನಲ್ಲಿ ಕಾದು ಕುಳಿತಿದ್ದರು. ಕಪ್ಪು ಬಣ್ಣದ ಲ್ಯಾಂಡ್ರೋವರ್ ಡಿಫೆಂಡರ್ ಕಾರಿನಲ್ಲಿ ನಲಪಾಡ್‌ ಜೊತೆಗೆ 8 ಜನ ಇದ್ದರು. ಮೋದಿ ತೆರಳುವ ಸಂದರ್ಭದಲ್ಲೇ ಚೊಂಬು ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

See also  ಶರಣಾಗತಿಗೂ ಮುನ್ನ ಹಲವು ಬೇಡಿಕೆಗಳನ್ನು ಮುಂದಿಟ್ಟ ನಕ್ಸಲರು..! 6 ಮಂದಿ ನಕ್ಸಲರಿಂದ ಕರ್ನಾಟಕ ಸರ್ಕಾರಕ್ಕೆ ಪತ್ರ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget