Latestಕ್ರೈಂಬೆಂಗಳೂರು

ನಾಗಸಾಧುವಿನ ವೇಷದಲ್ಲಿ ಬಂದು ಕಾರು ಚಾಲಕನ ಚಿನ್ನದ ಉಂಗುರ ಕಸಿದು ಪರಾರಿ..! ಉಂಗುರ ಪಡೆಯಲು ಕಳ್ಳ ಮಾಡಿದ ಪ್ಲಾನ್ ಹೇಗಿತ್ತು..?

546
Representative image

ನ್ಯೂಸ್ ನಾಟೌಟ್: ನಕಲಿ ನಾಗಸಾಧುವೊಬ್ಬ ಕಾರು ಚಾಲಕನಿಗೆ ಮಂಕುಬೂದಿ ಎರಚಿರೊ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಚಾಲಕನಿಗೆ ರುದ್ರಾಕ್ಷಿ ಕೊಟ್ಟು ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರ ಕಸಿದು ಪರಾರಿಯಾಗಿದ್ದಾನೆ.

ವೈಯಾಲಿಕಾವಲ್ ನಿವಾಸಿ ವೆಂಕಟಕೃಷ್ಣಯ್ಯ ಇದೇ ಏ.19ರಂದು ಖಾಸಗಿ ಹೋಟೆಲ್ ಬಳಿ ಮಾಲೀಕರನ್ನ ಡ್ರಾಪ್ ಮಾಡಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ನಕಲಿ ನಾಗಸಾಧು ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ಹೇಳಿದ್ದಾನೆ. ನಂತ್ರ ತನ್ನ ಅಸಲಿ ವರಸೆ ತೆಗೆದಿದ್ದಾನೆ.

ಚಾಲಕನಿಗೆ 5 ರುದ್ರಾಕ್ಷಿ ಕೊಟ್ಟು ಒಂದು ವಾಪಸ್ಸು ಕೂಡುವಂತೆ ಹೇಳಿದ್ದ. ವಾಪಸ್‌ ಕೊಟ್ಟ ರುದ್ರಾಕ್ಷಿಯನ್ನು ಪೇಪರ್‌ ನಲ್ಲಿ ಮಡಚಿ ಓಪನ್ ಮಾಡಿದ್ದ. ಈ ವೇಳೆ ರುದ್ರಾಕ್ಷಿ ಹೂ ಆಗಿ ಬದಲಾಗಿತ್ತು ಎಂದು ಕಾರು ಚಾಲಕ ಹೇಳಿಕೊಂಡಿದ್ದಾರೆ. ನೋಡು ಇದು ಶುಭ ಸೂಚಕ ನಿನಗೆ ಒಳ್ಳೆಯದಾಗುತ್ತೆ ಲಕ್ಷ್ಮಿ ಕೃಪಾಕಟಾಕ್ಷವಾಗುತ್ತೆ ಎಂದು ಕಾರು ಚಾಲಕನನ್ನು ಮಾತಿನಲ್ಲೆ ಮರುಳು ಮಾಡಿದ್ದಾನೆ.

ಬಳಿಕ ನಿನ್ನ ಕೈಯಲ್ಲಿರುವ ಚಿನ್ನದ ಉಂಗುರ ಕೊಡು ಎಂದು ಕೇಳಿದ್ದಾನೆ. ಚಿನ್ನದ ಉಂಗುರ ಬಿಚ್ಚಿ ಕೊಡುತ್ತಿದ್ದಂತೆ ಹಣೆಗೆ ಬೂದಿ ರೀತಿಯ ವಸ್ತುವನ್ನು ಹಚ್ಚಿದ್ದಾನೆ. ಹಿಂದೆ ತಿರುಗಿ ನೋಡದೇ ಸ್ವಲ್ಪ ಮುಂದೆ ಹೋಗು ಇಲ್ಲದಿದ್ರೆ ನಿನಗೆ ಕೆಡುಕಾಗುತ್ತದೆ ಎಂದು ಹೇಳಿದ್ದಾನೆ. ಆತನ ಮಾತು ಕೇಳಿ ಮಂಕುಬಡಿದಂತಾದ ವೆಂಕಟಕೃಷ್ಣಯ್ಯ ಉಂಗುರ ಕೊಟ್ಟು ಹಿಂತಿರುಗಿ ಸ್ವಲ್ಪ ಮುಂದೆ ಬಂದಿದ್ದಾನೆ. ಬಳಿಕ ನಕಲಿ ನಾಗಸಾಧು ಅಲ್ಲಿಂದ ಪರಾರಿಯಾಗಿದ್ದಾನೆ.

ಬಳಿಕ ಮನೆಯವರಿಗೆ ವಿಚಾರ ತಿಳಿಸಿದ ವೆಂಕಟಕೃಷ್ಣಯ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಗಸಾಧು ವೇಷದಲ್ಲಿ ಬಂದವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದು ನದಿಗೆ ಎಸೆದ ತಂದೆ..! ಸಿನಿಮೀಯ ರೀತಿಯಲ್ಲಿ ಬಯಲಾದ ಪ್ರಕರಣ..!

ಕಾರ್ಕಳ: ಕಾರಿನೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ..! ಪ್ರಕರಣ ದಾಖಲು

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಿಲ್ಲ ಎಂದ ಟರ್ಕಿ..! ಟರ್ಕಿಗೆ ಭೂಕಂಪ ಸಂದರ್ಭದಲ್ಲಿ ಭಾರೀ ಪ್ರಮಾಣದ ಸಹಾಯ ಮಾಡಿದ್ದ ಭಾರತ..!

See also  ಮೃತದೇಹಗಳಿರುವ 45 ಚೀಲಗಳು ಪತ್ತೆ..! ಪೊಲೀಸರಿಗೆ ಕಾದಿತ್ತು ಅಚ್ಚರಿ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget