ಕ್ರೈಂದೇಶ-ವಿದೇಶರಾಜ್ಯವೈರಲ್ ನ್ಯೂಸ್

ನಾಗಮಂಗಲ ಕೋಮು-ಗಲಭೆ: 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ, 150 ಜನರ ವಿರುದ್ಧ ಎಫ್.​ಐ.ಆರ್​..!

ನ್ಯೂಸ್ ನಾಟೌಟ್: ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ನಾಗಮಂಗಲ ಗಲಭೆ ಪ್ರಕರಣದ ಬಂಧಿತ 52 ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಸೆ.11 ರಂದು ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಬುಧವಾರ(ಸೆ.12) ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನೆಗೆ ಕೊಂಡೊಯ್ಯಲಾಗಿತ್ತು. ಈ ವೇಳೆ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದರು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ತಡರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು. ಪ್ರಕರಣ ಸಂಬಂಧ ಇದುವರೆಗೆ 53 ಜನರನ್ನು ಬಂಧಿಸಲಾಗಿತ್ತು. ಗಲಭೆ ಸಂಬಂಧ 150 ಜನರ ವಿರುದ್ಧ ಎಫ್.​ಐ.ಆರ್ ದಾಖಲಿಸಲಾಗಿತ್ತು.

ಬಂಧಿಸಲಾಗಿದ್ದ 52 ಆರೋಪಿಗಳನ್ನು ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಬಳಿಕ ನ್ಯಾಯಾಧೀಶರ ಮುಂದೆ ಬಂಧಿತರನ್ನು ಪೊಲೀಸರು ಹಾಜರುಪಡಿಸಿದ್ದರು. ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಹಿರಿಯ ಸಿವಿಲ್ ನ್ಯಾಯಾಧೀಶರು ಆದೇಶಿಸಿದ್ದಾರೆ.
52 ಆರೋಪಿಗಳ ಪೈಕಿ, 23 ಹಿಂದೂ ಹಾಗೂ 39 ಮುಸ್ಲಿಮರಿದ್ದಾರೆ. ಸದ್ಯ ಆರೋಪಿಗಳನ್ನು ನಾಗಮಂಗಲದಿಂದ ಮಂಡ್ಯ ಜೈಲಿಗೆ ಶಿಫ್ಟ್ ಮಾಡಲಾಗಿದೆ.

Click

https://newsnotout.com/2024/09/uppinangady-kannada-news-viral-posco-case-police-case-nelyady/
https://newsnotout.com/2024/09/chamundi-betta-mysore-food-issue-during-night-to-devotees/
https://newsnotout.com/2024/09/backward-class-hostel-warnden-arrest-by-lokayuktha-for-curruption/

Related posts

ಉತ್ತರ ಕನ್ನಡ: ತರಕಾರಿ ತುಂಬಿದ್ದ ಲಾರಿ ಉರುಳಿಬಿದ್ದು 10 ಮಂದಿ ಸಾವು ಪ್ರಕರಣಕ್ಕೆ ಸ್ಪಂದಿಸಿದ ಪ್ರಧಾನಿ..! ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಪರಿಹಾರ ಘೋಷಿಸಿದ ಮೋದಿ

ಪುತ್ತೂರು: ಬಸ್ ನಿಲ್ದಾಣದಲ್ಲಿ ಅಪರಿಚಿತ ಶವ ಪತ್ತೆ

ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡ್ತೇನೆ ಎಂದ ಬಿಎಸ್​ ಯಡಿಯೂರಪ್ಪ, ಜಗದೀಶ್​ ಶೆಟ್ಟರ್ ಮತ್ತು ಈಶ್ವರಪ್ಪ ಪುತ್ರನ ನಡುವೆ ಪೈಪೋಟಿ..?