ಸಂಪಾಜೆ: ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ತೆಕ್ಕಿಲ್ ಮಾದರಿ ಪ್ರೌಢ ಶಾಲೆ ಗೂನಡ್ಕ ಸಂಪಾಜೆ ವಿದ್ಯಾರ್ಥಿನಿ ಕುಮಾರಿ ನಂದಿತಾ ಪಿ ಕೆ ರವರು 625 ರಲ್ಲಿ 601 ಅಂಕ ಪಡೆದಿದ್ದಾರೆ. ಇವರು ಕುಸುಮಾಕರ ಪಿ ಮತ್ತು ಪೂರ್ಣಿಮ ಕಲ್ಲಪಳ್ಳಿ ದಂಪತಿಗಳ ಪುತ್ರಿ. ತೆಕ್ಕಿಲ್ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿರುತಾರೆ. ಇವರಿಗೆ ತೆಕ್ಕಿಲ್ ಶಿಕ್ಷಣ ಸಂಸ್ಥೆ ಗೂನಡ್ಕ ಅಧ್ಯಕ್ಷರು ಹಾಗು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದನೆ ಸಲ್ಲಿಸಿದ್ದಾರೆ