ರಾಜಕೀಯರಾಜ್ಯವೈರಲ್ ನ್ಯೂಸ್ಶಿಕ್ಷಣ

ರಾಜ್ಯವ್ಯಾಪಿ ಸುದ್ದಿಯಾದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳ ಭತ್ತದ ಕೃಷಿಯ ವಿಡಿಯೋ ಕಂಡು ಕೃಷಿ ಸಚಿವರು ಹೇಳಿದ್ದೇನು..?

ನ್ಯೂಸ್ ನಾಟೌಟ್: ಇತ್ತೀಚೆಗೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೇ ನೆಟ್ಟು ಬೆಳೆಸಿದ ಭತ್ತದ ಕೃಷಿಯ ಬಗ್ಗೆ ‘ನ್ಯೂಸ್ ನಾಟೌಟ್ ಚಾನೆಲ್ ನ ವ್ಲಾಗ್ ವಿತ್ ಹೇಮಂತ್ ಸಂಪಾಜೆ ವಿಶೇಷ ಕಾರ್ಯಕ್ರಮದ ಮೂಲಕ ಪ್ರಸಾರವಾಗಿತ್ತು. ಈ ಕೃಷಿ ವಿಡಿಯೋ ಕಂಡಿರುವ ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಬಗ್ಗೆ ಪ್ರಾಯೋಗಿಕ ಅನುಭವ ನೀಡುವ ದಿಶೆಯಲ್ಲಿ ತಮ್ಮ ಶಾಲೆಯ ಆಟದ ಮೈದಾನವನ್ನೇ ತಾತ್ಕಾಲಿಕವಾಗಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ, ಅಲ್ಲಿ ಭತ್ತ ನಾಟಿ ಮಾಡಿ ಕೊಯ್ಲು ಮಾಡಿರುವ ಬಗ್ಗೆ ತಿಳಿದು ಅತ್ಯಂತ ಸಂತೋಷವಾಯಿತು. ಕೊಯ್ಲಿನ ಬಳಿಕ ಈ ಭೂಮಿ ಪುನಃ ಆಟದ ಮೈದಾನವಾಗಿ ಬದಲಾಗಲಿದೆ. ಮಕ್ಕಳಿಗೆ ಆಟ, ಪಾಠದ ಜೊತೆ ಕೃಷಿ ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳಲು ಪೂರಕ ವಾತಾವರಣ ಕಲ್ಪಿಸುವ ಮೂಲಕ ಯುವ ಪೀಳಿಗೆಗೆ ಕೃಷಿ ಚಟುವಟಿಕೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಜೊತೆ ಅವರಲ್ಲಿ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಮೂಡುವಂತಾಗಲು ಇಂತಹ ಚಟುವಟಿಕೆಗಳು ಮಾದರಿ ಹೆಜ್ಜೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ.

Related posts

ಒಂದು ಸೀರೆ ತಯಾರಿಸಲು 2 ವರ್ಷ ಬೇಕಾಯ್ತಾ..? ಇದರ ಬೆಲೆ ಬರೋಬ್ಬರಿ 21.9 ಲಕ್ಷ ರೂ.! ಈ ಸೀರೆ ಯಾಕಿಷ್ಟು ದುಬಾರಿ?

ಪುತ್ತೂರು:ಸ್ವತಂತ್ರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಕಣಕ್ಕೆ,ಏ.17ರಂದು ನಾಮಪತ್ರ ಸಲ್ಲಿಕೆ

ಜೆ.ಪಿ.ನಡ್ಡಾ, ಬಿವೈ ವಿಜಯೇಂದ್ರ ವಿರುದ್ಧ ಎಫ್​​ಐಆರ್ ದಾಖಲು..! ಏನಿದು ಪ್ರಕರಣ?