ಕ್ರೈಂ

ಬರೋಬ್ಬರಿ 15 ಮಹಿಳೆಯರ ಜತೆ ವಿವಾಹವಾಗಿ ಚಿನ್ನಾಭರಣ ದೋಚಿದ ಖದೀಮ, ಮದುವೆಯಾಗುವುದನ್ನೇ ಉದ್ಯಮವನ್ನಾಗಿಸಿಕೊಂಡಿದ್ದವ ಈಗ ಪೊಲೀಸರ ಅತಿಥಿ..!

307

ನ್ಯೂಸ್ ನಾಟೌಟ್ : ಈತ ಮದುವೆಯಾಗಿದ್ದು, ಒಂದಲ್ಲ, ಎರಡಲ್ಲ.. ಬರೋಬ್ಬರಿ ೧೫ ಮದುವೆಯಾಗಿ ಹೆಂಗಸರಿಗೆ ಮೋಸ ಮಾಡಿದ ಅಸಾಮಿ.ಈ ವಂಚಕನನ್ನು ಪೊಲೀಸರು ಸೆರೆ ಸೆರೆ ಹಿಡಿದು ಆತನಿಗೆ ಗತಿ ಕಾಣಿಸಿದ್ದಾರೆ.ಈತ ವಿಧವೆಯರು, ಅವಿವಾಹಿತ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡೇ ಈ ವಂಚನೆ ಮಾಡುತ್ತಿದ್ದ ಎಂದು ವರದಿಯಾಗಿದೆ.ಆನ್​ಲೈನ್​ನಲ್ಲಿ ಗಾಳ ಹಾಕಿ ಬೆಣ್ಣೆಯಂತಹ ಮಾತುಗಳನ್ನಾಡಿ ಮರುಳು ಮಾಡುತ್ತಿದ್ದ ಎನ್ನಲಾಗಿದ್ದು, ಮದುವೆಯಾಗಿ ಹಣ ಮತ್ತು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಈ ಭೂಪ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ .


ಬಂಧಿತ ವ್ಯಕ್ತಿ ಮಹಿಳೆಯರನ್ನು ನಂಬಿಸಿ ಚಿನ್ನಾಭರಣ ಹಾಗೂ ಹಣದ (Gold And Jewellery) ಜೊತೆ ಎಸ್ಕೇಪ್ ಆಗುತ್ತಿದ್ದನು ಎಂದು ವರಿದಿಯಾಗಿದೆ. 35 ವರ್ಷದ ಮಹೇಶ್ ಬಂಧಿತ ಆರೋಪಿಯೆಂದು ತಿಳಿದು ಬಂದಿದೆ.ಬಂಧಿತನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್​ಲೆಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್​ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.


ಮಹೇಶ್ ಬೆಂಗಳೂರಿನ ಬನಶಂಕರಿ ನಿವಾಸಿ.ಈತ ಮೈಸೂರು ಮೂಲದ ಮಹಿಳೆಯನ್ನು ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡಿದ್ದನು. ಈ ವೇಳೆ ತಾನೋರ್ವ ಡಾಕ್ಟರ್ ಎಂದು ಹೇಳಿಕೊಂಡು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆಯಾಗಿದ್ದನು ಎನ್ನಲಾಗಿದೆ.ಮದುವೆ ಬಳಿಕ ಕ್ಲಿನಿಕ್ ತೆರೆಯಲು 70 ಲಕ್ಷ ಹಣ ಸಾಲ ಕೊಡಿಸುವಂತೆ ಮಹಿಳೆ ಮೇಲೆ ಒತ್ತಡ ಹಾಕಿದ್ದನು. ಸಾಲ ಅಥವಾ ಹಣ ಕೊಡದಿದ್ರೆ ಕೊಲೆ ಬೆದರಿಕೆ ಸಹ ಹಾಕಿದ್ದನು. ಕೊನೆಗೆ ಹೇಮಲತಾ ಬಳಿಯಲ್ಲಿದ್ದ ಚಿನ್ನಾಭರಣ ಮತ್ತು 15 ಲಕ್ಷ ನಗದು ಕದ್ದುಕೊಂಡು ಪರಾರಿಯಾಗಿದ್ದನು. ಈ ಸಂಬಂಧ ಮಹಿಳೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪತಿ ಮಹೇಶ್ ವಿರುದ್ಧ ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.


ಆರೋಪಿ ಮಹೇಶ್ ತಾನೋರ್ವ ಇಂಜಿನಿಯರ್, ಗುತ್ತಿಗೆದಾರ, ಸರ್ಕಾರಿ ಉದ್ಯೋಗಿ ಎಂದು ಹೇಳಿ ಹಲವು ಮಹಿಳೆಯರನ್ನು ವಂಚಿಸಿರೋದು ಬೆಳಕಿಗೆ ಬಂದಿದೆ.ಇದುವರೆಗೂ ಮಹೇಶ್ 15 ಮಹಿಳೆಯರನ್ನು ನಂಬಿಸಿ ಅವರಿಗೆ ಕೈ ಕೊಟ್ಟಿರುವ ಬಗ್ಗೆ ವರದಿಯಾಗಿದೆ.ಸದ್ಯ ಈತನ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು ಕಾರ್ಯಪ್ರವೃತ್ತರಾಗಿ ಆರೋಪಿ ಮಹೇಶ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆದ್ರೆ ಈವರೆಗೆ ಮೋಸಕ್ಕೊಳಗಾದ ಮಹಿಳೆಯರು ದೂರು ದಾಖಲಿಸಿಲ್ಲ ಏಕೆ ಮತ್ತು ಅವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

See also  ಮಹಿಳೆಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಕೂರಿಸಿ ಹೊಳೆ ದಾಟಿಸಿದ ವ್ಯಕ್ತಿ..! ಇಲ್ಲಿದೆ ಮನಕಲಕುವ ಘಟನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget